ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಅಲ್ಲಿ ಸಿಗುತ್ತೆ. ಆದ್ರೆ ಈ ಮೆಡಿಕಲ್ ಕಾಲೇಜು ಹಿರಿಯ ಅಧಿಕಾರಿ ಹಾಗೂ ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ಇಂದು ಅಲ್ಲಿನ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ನಿರ್ದೇಶಕ ಕಳಸದ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಹುಸೇನ್ ಖಾಜಿಯ ಮಧ್ಯೆಯ ಹೊಂದಾಣಿಕೆ ಕೊರತೆ ಹಾಗೂ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಸರ್ಕಾರಿ ಸಿಬ್ಬಂದಿಗೆ ಸಂಬಳ ಸಿಕ್ತಿಲ್ವಂತೆ. ಬಿಮ್ಸ್‍ನಲ್ಲಿ 170ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡ್ತಿದ್ದು, ಕಳೆದ 9 ತಿಂಗಳಿನಿಂದ ಪರಿಷ್ಕೃತ ಸಂಬಳ ಸಿಗ್ತಿಲ್ಲ. ಇದೇ ಕಾರಣಕ್ಕೆ ಇಂದು ಆಸ್ಪತ್ರೆಯ ಸಿಬ್ಬಂದಿ ಇಬ್ಬರು ಅಧಿಕಾರಿಗಳನ್ನು ಸೇರಿಸಿ ಕೊಠಡಿಯಲ್ಲಿ ತರಾಟೆ ತೆಗೆದುಕೊಂಡ್ರು.
Advertisement
Advertisement
ಸಂಬಳಕ್ಕಾಗಿ ಅರ್ಜಿ ಕೊಡಿ ಎಂದು ಆಸ್ಪತ್ರೆಯ ಸರ್ಜನ್ ಹುಸೇನ್ ಸಾಬ್ ಖಾಜಿ ಸಿಬ್ಬಂದಿಗೆ ಹೇಳಿದ್ರು. ಇದ್ರಿಂದ ರೊಚ್ಚಿಗೆದ್ದ ಸಿಬ್ಬಂದಿ ನಾವು ಕಳೆದ ಹದಿನೈದು ದಿನಗಳಿಂದ ಹೇಳುತ್ತಿದ್ದೇವೆ ಅರ್ಜಿ ಕೊಡಲು ನಾವು ಬಂದಿಲ್ಲ ಅಂದ್ರು. ಇದಕ್ಕೆ ಸರ್ಜನ್ ಖಾಜಿ ಆಸ್ಪತ್ರೆಗೆ ಬೀಗ ಹಾಕಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ರು. ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಆಸ್ಪತ್ರೆಗೆ ಬೀಗ ಹಾಕಿ ಎನ್ನುತ್ತಿದ್ದಿರಾ..? ನಿಮಗೆ ಕಾಳಜಿ ಇಲ್ವಾ ಎಂದು ಗರಂ ಆದ್ರು ಎಂದು ಸರ್ಕಾರಿ ನೌಕರ ಸಂಘದ ಸದಸ್ಯ ಜಗದೀಶ್ ಹೇಳಿದ್ದಾರೆ.
Advertisement
ಈ ಬಗ್ಗೆ ಬಿಮ್ಸ್ ನಿರ್ದೇಶಕರನ್ನ ಕೇಳಿದ್ರೆ ಪರಿಷ್ಕೃತ ಸಂಬಳ ನೀಡಲು ನಮ್ಮ ಬಳಿ ಹಣವಿರಲಿಲ್ಲ. ಈಗ ನಾಲ್ಕು ಕೋಟಿ ಬಂದಿದೆ ಅಂತೆ. ಇನ್ನೂ ನಾಲ್ಕು ಕೋಟಿ ಬರಬೇಕಿದೆ ಅದು ಬಂದ ಕೂಡಲೇ ಹದಿನೈದು ದಿನಗಳ ಒಳಗಾಗಿ ಸಂಬಳ ನೀಡ್ತೇವೆ ಎನ್ನುತ್ತಿದ್ದಾರೆ.
Advertisement
ಆಸ್ಪತ್ರೆಯ ಸಿಬ್ಬಂದಿಯ ಕಥೆ ಹೀಗಾದ್ರೆ ರೋಗಿಗಳ ಕಥೆಯೇನು. ಇಬ್ಬರು ಮೇಲಾಧಿಕಾರಿಗಳ ಸಣ್ಣತನದಿಂದ ಕಾರ್ಮಿಕರ ಈ ಸ್ಥಿತಿ ಬಂದಿದ್ದು, ಸರ್ಕಾರ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ನೀಡಬೇಕಿದೆ ಎಂದು ಸಿಬ್ಬಂದಿ ಆಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv