ಬೆಳಗಾವಿ: ಚಂದ್ರಯಾನ-3 (Chandrayaan-3) ಯಶಸ್ಸಿನ ಹಿಂದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕೊಡುಗೆಯೂ ಇದೆ. ಚಂದ್ರಯಾನ-3 ಯೋಜನೆಗಾಗಿ ರಾಕೆಟ್‌ಗೆ ಕೆಲವು ಬಿಡಿ ಭಾಗಗಳನ್ನು ಪೂರೈಸಿದ್ದ ಬೆಳಗಾವಿಯ (Belagavi) ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ & ಟೆಕ್ನಾಲಜಿ ಕಂಪನಿ (Servo Controller Aerospace) ಎಂಡಿ ದೀಪಕ್ ಧಡೂತಿ (Deepak Dhadooti) ಮಾತನಾಡಿದ್ದಾರೆ.
Advertisement
ಚಂದ್ರಯಾನ-3 ಯಶಸ್ಸಿಗೆ ದೀಪಕ್ ಸಂಸತ ವ್ಯಕ್ತಪಡಿಸಿದ್ದಾರೆ. ಇಸ್ರೋ ಸಾಧನೆ ಕುರಿತು ಮಾತನಾಡಿರುವ ಅವರು, ಚಂದ್ರಯಾನ-3 ಯಶಸ್ಸು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯುವ ದಿನ. ಚಂದ್ರಯಾನ-3ಗೆ ಕೆಲವು ಬಿಡಿ ಭಾಗಗಳನ್ನ ಸಪ್ಲೈ ಮಾಡಿದ್ದೇವೆ. ರಾಕೆಟ್‌ಗೆ ಕ್ರಯೋಜನಿಕ್ ಅನ್ನೋ ಬಿಡಿ ಭಾಗ ಸಪ್ಲೈ ಮಾಡಿದ್ದರೆ, ವಿಕ್ರಮ್ ಲ್ಯಾಂಡರ್‌ಗೆ ಕ್ರಿಟಿಕಲ್ ಹೈಡ್ರೋಲಿಕ್ ಹೆಸರಿನ ಸೆನ್ಸರ್ ನೀಡಿದ್ದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್ ರೋವರ್ – ವಿಕ್ರಮ್ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?
Advertisement
Advertisement
ನಾವು ಕಳುಹಿಸಿರುವ ಸೆನ್ಸರ್‌ಗಳು ಸೋಲಾರ್ ಪ್ಯಾನಲ್ ಓಪನ್ ಆಗಲು ಬಳಕೆ ಆಗುತ್ತವೆ. ಸದ್ಯ ವಿಕ್ರಮ್ ಲ್ಯಾಂಡರ್ ಮೂವ್‌ಮೆಂಟ್ ಎಲ್ಲವೂ ಸೆನ್ಸರ್‌ನಿಂದಲೇ ಆಗುತ್ತಿದೆ. ಇಸ್ರೋ ಜೊತೆಗೆ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಮುಂದಿನ ಪ್ರಾಜೆಕ್ಟ್ ಗಗನಯಾನಕ್ಕೂ ನಮ್ಮ ಕಂಪನಿಯ ಬಿಡಿಭಾಗಗಳು ತಯಾರು ಆಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
Advertisement
ನಾವು ಕಳುಹಿಸಿದ ಸೆನ್ಸರ್‌ಗಳು ಲ್ಯಾಂಡರ್, ರೋವರ್‌ನಲ್ಲಿ ಬಳಕೆಯಾಗಿವೆ. ಚಂದ್ರಯಾನ-2ರಲ್ಲಿ ಸಹ ಬಿಡಿಭಾಗಗಳನ್ನ ಪೂರೈಕೆ ಮಾಡಿದ್ದೆವು. ನಿನ್ನೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಿದ್ದು ಬಹಳಷ್ಟು ಖುಷಿ ತಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಟೀಂ ಇಂಡಿಯಾ
Web Stories