ಬೆಂಗಳೂರು: ಬೆಳಗಾವಿ ಬ್ಯಾಂಕ್ ಬ್ಯಾಟಲ್ ನಲ್ಲಿ ಬಿಜೆಪಿ ಸೈಲೆಂಟ್ ಆಗಿದ್ದು, ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.
ನಮ್ಮ ಪಕ್ಷದ ಯಾರೂ ಜಾರಕಿಹೊಳಿ ಬ್ರದರ್ಸ್, ಲಕ್ಷ್ಮೀ ಹೆಬ್ಬಾಳ್ಕರ್ ಪರ ವಿರೋಧ ನಿಲ್ಲಬಾರದು. ಅದು ಅವರ ಪಕ್ಷದ ಒಳ ಬೇಗುದಿ. ಎಲ್ಲಿಗೆ ಹೋಗಿ ತಲುಪುತ್ತೆ ನೋಡೋಣ. ಅವರ ಮೇಲಾಟ ಮುಗಿದ ಮೇಲೆ ನಮ್ಮ ಆಟ ಏನು ಅನ್ನೋದನ್ನ ನೋಡೋಣ ಅಂತ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
ಸದ್ಯಕ್ಕೆ ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ಬಿಎಸ್ ವೈ ಖಡಕ್ ಸೂಚನೆ ನೀಡಿದ್ದಾರೆ.
Advertisement
Advertisement
ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ನವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಎಂಬುದಕ್ಕೆ ಬೆಳಗಾವಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯೇ ಸಾಕ್ಷಿ. ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಇಂತಹ ಹೀನಾಯ ಸ್ಥಿತಿ ಬರಬಾರದು. ಆದ್ರೆ ಅವರ ಬಡಿದಾಟ ಅವರಿಗೆ ಮಾತ್ರ ಸಂಬಂಧಪಟ್ಟಿದ್ದಾಗಿದೆ. ಹೀಗಾಗಿ ನಾವು ಇದ್ರಲ್ಲಿ ತಲೆತೂರಿಸುವುದಿಲ್ಲ ಅಂತ ಹೇಳಿದ್ದಾರೆ.
Advertisement
ಒಬ್ಬ ಮಂತ್ರಿ, ಇನ್ನೊಬ್ಬ ಮಹಿಳೆ ಹಾಗೂ ಚುನಾಯಿತ ಪ್ರತಿನಿಧಿ. ಜಾರಕಿಹೊಳಿ ಈ ಶಾಸಕಿಯನ್ನು ಕಾಲಕಸಕ್ಕಿಂತ ಸಮ. ಇದು ಮಹಿಳಾ ಕುಲಕ್ಕೆ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನ. ಹಾದಿ ರಂಪ, ಬೀದಿ ರಂಪ ಮಾಡಿಕೊಂಡು ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿ ಇದೆ ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv