Belgaum

ಮೂರು ದಿನಗಳ ಕಾರ್ಯಾಚರಣೆ ವಿಫಲ – ಕೊನೆಗೂ ಬದುಕಲಿಲ್ಲ ಬಾಲಕಿ ಕಾವೇರಿ

Published

on

Share this

ಬೆಳಗಾವಿ: ರಾಜ್ಯ ಸರ್ಕಾರಕ್ಕೆ. ಜನಕ್ಕೆ ಎಷ್ಟು ಬಲಿ ಬೇಕೋ ಗೊತ್ತಿಲ್ಲ. ಕಳೆದ 3 ದಿನಗಳಿಂದ ನಡೀತಿದ್ದ ರಕ್ಷಣಾ ಕಾರ್ಯ ಫಲಿಸಲಿಲ್ಲ. ಅಥಣಿಯ ಝಂಜರವಾಡದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಬಾಲಕಿ ಕಾವೇರಿ ಬದುಕಲಿಲ್ಲ.

ಕಾವೇರಿ ಬದುಕಿ ಬರಲಿ ಅನ್ನೋ ಕೋಟಿ ಕೋಟಿ ಜನರ ಪ್ರಾರ್ಥನೆ ಆ ದೇವರಿಗೆ ತಲುಪಲಿಲ್ಲ. ಶನಿವಾರ ರಾತ್ರಿ 8 ಗಂಟೆಗೆ ಶುರುವಾದ ಕಾರ್ಯಾಚರಣೆ ಇವತ್ತು ರಾತ್ರಿ 8 ಗಂಟೆ ವರೆಗೂ ನಡೆಯಿತು. ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ಸುಮಾರು 25 ಅಡಿ ಆಳದಲ್ಲಿ ಬಾಲಕಿ ಕಾವೇರಿ ಶವ ಸಿಕ್ಕಿದೆ.

ಶವ ಕೊಳೆತಿರೋದ್ರಿಂದ ಅರ್ಧ ಶವ ಸಿಕ್ಕಿದೆ. ಇನ್ನರ್ಧ ಶವ ಸಿಗಬೇಕಿದೆ. ಅರ್ಧ ದೇಹ ಸಿಕ್ಕಿರೋದನ್ನ ರಕ್ಷಣಾ ಸಿಬ್ಬಂದಿ ಖಚಿತಪಡಿಸಿದ್ದಾರೆ. ಇನ್ನು ಈ ಬಗ್ಗೆ ಐಜಿ ರಾಮಚಂದ್ರ ರಾವ್ ಕೂಡಾ ಪಬ್ಲಿಕ್ ಟಿವಿ ಜೊತೆ ಮಾತಾಡಿ, ಶವ ಕೊಳೆತು ವಾಸನೆ ಬರ್ತಿದೆ. ಸಾವಿನ ಬಗ್ಗೆ ವೈದ್ಯರೇ ಖಚಿತಪಡಿಸಬೇಕು ಅಂತಾ ಹೇಳಿದ್ದಾರೆ. ಪೂರ್ತಿಯಾಗಿ ಶವ ಸಿಕ್ಕ ಬಳಿಕ ಅಧಿಕೃತ ಘೋಷಣೆ ಮಾಡೋ ಸಾಧ್ಯತೆ ಇದೆ.

ಸಂಜೆಯೇ ಕಾವೇರಿ ಬದುಕಿರೋದು ಅನುಮಾನ ಅಂತಾ ಪರೋಕ್ಷವಾಗಿ ಜಿಲ್ಲಾಧಿಕಾರಿ ಜಯರಾಮ್ ಹೇಳಿದ್ರು. ಬಾಲಕಿಯ ಯಾವುದೇ ಚಲನವಲನ ಇಲ್ಲ. ಕಾರ್ಯಾಚರಣೆ ಸ್ಥಳದಲ್ಲಿ ಕೊಳೆತ ವಾಸನೆ ಬರ್ತಿದೆ ಅಂತಾ ಕೂಡಾ ಹೇಳಲಾಗಿತ್ತು. ಆದರೂ ದೊಡ್ಡ ಆಸೆಯೊಂದಿಗೆ ಕಾರ್ಯಾಚರಣೆ ಮುಂದುವರಿದಿತ್ತು.

ಕಾರ್ಯಾಚರಣೆ ಹೀಗಿತ್ತು: 27 ಅಡಿ ಆಳದಲ್ಲಿ ಕಾವೇರಿಯ ಕೈಗಳು ಕ್ಯಾಮೆರಾಗೆ ಕಾಣಿಸಿದ್ದವು. ಹುಕ್ ಮೂಲಕ ಬಾಲಕಿಯನ್ನು ಐದಾರು ಬಾರಿ ಮೇಲೆತ್ತುವ ಪ್ರಯತ್ನ ಮಾಡಿದ್ರೂ ಯಶಸ್ವಿಯಾಗಲಿಲ್ಲ. ದೊಡ್ಡ ಗಾತ್ರದ ಬಂಡೆಗಳು ಸಿಕ್ಕಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು.

ಎನ್‍ಡಿಆರ್‍ಎಫ್ ಸಿಬ್ಬಂದಿ, ಎಂಎಲ್‍ಐಆರ್‍ಸಿ ಸಿಬ್ಬಂದಿಗಳಿಂದ ಕಾರ್ಯಾಚರಣೆ ಶನಿವಾರ ರಾತ್ರಿಯಿಂದಲೇ ನಡೆದಿತ್ತು. ಅವಸರ ಮಾಡಿದ್ರೆ ಬಾಲಕಿ ಕಾವೇರಿ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಗಳಿರುವ ನಿಟ್ಟಿನಲ್ಲಿ ಈವರೆಗೂ ಸೂಕ್ಷ್ಮವಾಗಿ ಕಾರ್ಯಾಚರಣೆ ಮಾಡಿದ್ದೇವು ಅಂತಾ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹೇಳಿದ್ದಾರೆ.

ಸತತ ಕಾರ್ಯಾಚರಣೆಯ ಬಳಿಕ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಂಧ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವು. ಆದ್ರೆ ಈ ವೇಳೆ ಬಂಡೆ ಕಲ್ಲುಗಳು ಅಡ್ಡಿಪಡಿಸಿದವು. ನಂತ್ರ ಯಂತ್ರೋಪಕರಣಗಳನ್ನು ಬಳಸಿ ರಂಧ್ರ ಕೊರೆಯುವುದಾಗಿ ನಿರ್ಧರಿಸಲಾಯಿತು. ಅಂತೆಯೇ ಕಾರ್ಯಾಚರಣೆ ಕೊನೆ ಹಂತ ತಲುಪಿತು ಅಂತಾ ಎನ್‍ಡಿಆರ್‍ಎಫ್ ಟೀಂನ ಅಧಿಕಾರಿ ಭಜೇಂದರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ರು.

ಬಾಲಕಿ ಕಾವೇರಿ ಕೊಳವೆ ಬಾವಿಯಲ್ಲಿ ಸಿಲುಕಿ 36 ಗಂಟೆ ನಂತ್ರ ಕೊಳವೆ ಬಾವಿ ಪಕ್ಕದಲ್ಲೇ 25 ಅಡಿ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಯಿತು. ಬಾಲಕಿಯ ಕಾರ್ಯಾಚರಣೆಗೆ 2 ಹಿಟಾಚಿ, 2 ಜೆಸಿಬಿ ಬಳಕೆ ಮಾಡಲಾಗಿದ್ದು, ಇನ್ನು ಸ್ಥಳದಲ್ಲಿ ಅಗ್ನಿಶಾಮಕ ದಳ, ಎನ್‍ಡಿಆರ್‍ಎಫ್, ಎಂಎಲ್‍ಐಆರ್‍ಸಿ ಅಧಿಕಾರಿಗಳು ಹಾಗೂ ಹಟ್ಟಿ ಚಿನ್ನದ ಗಣಿಯ ನುರಿತ ತಜ್ಞರ ತಂಡವು ಕಾರ್ಯಾಚರಣೆ ನಡೆಸಿತ್ತು.

ಸರ್ಕಾರಕ್ಕೆ ಕಾವೇರಿ ತಾಯಿ ಮನವಿ: ನಮ್ಗೆ ಆಗಿರೋ ಆದ ಪರಿಸ್ಥಿತಿ ಬೇರೆಯವರಿಗೆ ಆಗೋದು ಬೇಡ, ಪರಿಹಾರವೂ ನಮ್ಗೆ ಬೇಡ. ರಾಜ್ಯದಲ್ಲಿ ಇರುವ ಎಲ್ಲಾ ತೆರೆದ ಬೋರ್‍ವೆಲ್‍ಗಳನ್ನ ಮುಚ್ಚಿಸಿ ಅಂತಾ ಕಾವೇರಿ ತಾಯಿ ಸವಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ನಮಗೆ ಪರಿಹಾರ ಬೇಡ ಏನೂ ಬೇಡ ಗೋಳಿಟ್ಟಿದ್ದಾರೆ.

ಸಾಂತ್ವನ ಹೇಳಲು, ಮನೋಸ್ಥೈರ್ಯ ತುಂಬಲು ಸಂಬಂಧಿಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಕುಟುಂಬದವರ ಬಳಿ ತೆರಳುತ್ತಿದ್ದಂತೆಯೇ ಅವರ ದುಃಖದ ಕಟ್ಟೆಯೊಡೆಯುತ್ತಿತ್ತು. ರೋದನ ಮುಗಿಲು ಮುಟ್ಟುತ್ತಿತ್ತು. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಂಬಂಧಿಕರು, ನೆರೆಹೊರೆಯವರು ಜಾಲಿ ಮರದ ಕೆಳಗೆ ಕುಳಿತು ಒಬ್ಬರನ್ನೊಬ್ಬರು ಸಂತೈಸುತ್ತಿದ್ದರು. ಬಾಲಕಿಯ ಉಳಿವಿಗಾಗಿ ಒಂದೆಡೆ ಪ್ರಾರ್ಥಿಸುತ್ತಿದ್ದರೆ, ಇನ್ನೊಂದೆಡೆ ಕಣ್ಣೀರ ಕೋಡಿ ಹರಿಯುತ್ತಿದ್ದ ದೃಶ್ಯಗಳು ಸೋಮವಾರ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ಗೋಚರಿಸಿತ್ತು,

ಶೋಭಾ ಕರಂದ್ಲಾಜೆ ಕಿಡಿ: ಬೋರ್‍ವೆಲ್ ದುರಂತಕ್ಕೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತಾಡಿದ ಅವರು, ಸರ್ಕಾರದ ನಿರ್ಲಕ್ಷ್ಯದಿಂದ ಕೊಳವೆ ಬಾವಿ ದುರಂತಗಳು ಸಂಭವಿಸ್ತಿವೆ ಅಂತಾ ಆರೋಪ ಮಾಡಿದ್ರು. ಈ ನಡುವೆ ಕೊಳವೆ ಬಾವಿ ಮುಚ್ಚಲು ಬಿತ್ತಿ ಪತ್ರಗಳ ಮೂಲಕ ಅರಿವು ಮೂಡಿಸ್ತೇನೆ ಅಂತಾ ಸಚಿವ ಕೃಷ್ಣೇಭೈರೇಗೌಡ ಹೇಳಿದ್ದಾರೆ.

ರಿಯಾಲಿಟಿ ಚೆಕ್: ತೆರೆದ ಕೊಳವೆ ಬಾವಿಗಳಿಗೆ ಮುಗ್ಧ ಮಕ್ಕಳು ಬಲಿಯಾಗ್ತಿದ್ರೂ ನಮ್ಮ ಜನ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇವತ್ತು ನಿಮ್ಮ ಪಬ್ಲಿಕ್ ಟಿವಿ ಸಾಕಷ್ಟು ಕಡೆ ರಿಯಾಲಿಟಿ ಚೆಕ್ ಮಾಡಿದೆ. ಚಿಕ್ಕಬಳ್ಳಾಪುರದ ಕೆಲವೆಡೆ ಫೇಲ್ ಆಗಿರೋ ಕೊಳವೆ ಬಾವಿಗಳಿಗೆ ಗೋಣಿಚೀಲ ಮುಚ್ಚಿ ಮೇಲೊಂದು ಚಪ್ಪಡಿಗಲ್ಲು ಇಟ್ಟಿದ್ದಾರೆ.

ಬಳ್ಳಾರಿಯ ದಮ್ಮೂರಿನಲ್ಲಿ ಕುಡಿಯುವ ನೀರಿಗೆ ಕೊರೆಸಿದ 2 ಕೊಳವೆ ಬಾವಿಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ರಾಯಚೂರಿನ ಲಿಂಗಸೂಗೂರಿನ ಮಸ್ಕಿಯಲ್ಲಿ ಕೆಲವೆಡೆ ಬೋರ್‍ವೆಲ್‍ಗಳನ್ನು ಮಚ್ಚೇ ಇಲ್ಲ. ಬೀದರ್‍ನ ಹಮೀಲಾಪೂರ ಗ್ರಾಮದ ಬಳಿ 15 ವರ್ಷಗಳ ಹಿಂದೆ ಕೊರೆಸಿದ್ದ ಬೋರ್‍ವೆಲ್ ಈಗಲೂ ಬಲಿಗಾಗಿ ಕಾಯ್ತಿದೆ.

ಈ ನಡುವೆ ಖಾಸಗಿ ಜಮೀನುಗಳಲ್ಲಿರುವ ಕೊಳವೆ ಬಾವಿಗಳನ್ನ ಮುಚ್ಚದೇ ಇದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸೋದಾಗಿ ಕೋಲಾರ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ನೆಮ್ಮದಿ ವಿಚಾರ ಅಂದ್ರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಸುತ್ತಮುತ್ತ ಶಾಸಕ ಟಿ. ರಘುಮೂರ್ತಿ ಓಡಾಡಿ ತೆರೆದ ಕೊಳವೆ ಬಾವಿಗೆ ಕಲ್ಲು, ಮಣ್ಣು ಹಾಕಿ ಮುಚ್ಚಿದ್ರು.

ಈ ಹಿಂದಿನ ಪ್ರಕರಣಗಳು: ನಮ್ಮಲ್ಲಿ ಜಾಗೃತಿ ಮೂಡಿಸಿದ್ರೂ ಜನ ಎಚ್ಚೆತ್ತುಕೊಳ್ಳಲ್ಲ. ಸರ್ಕಾರಗಳು ತಲೆ ಕೆಡಿಸಿಕೊಳ್ಳಲ್ಲ. ಇದಕ್ಕೆ ನಿದರ್ಶನ ಬಾಲಕಿ ಕಾವೇರಿ ಘಟನೆ. ರಾಜ್ಯದಲ್ಲಿ ಈ ಹಿಂದೆಯೂ ಕೊಳವೆ ಬಾವಿ ದುರಂತಗಳು ನಡೆದಿವೆ.

* 2000 – ದಾವಣಗೆರೆ – ಬಾಲಕ ಕರಿಯ ಸಾವು
* 2006 – ಬಾಗಲಕೋಟೆ – ಸಿಕ್ಕೇರಿಯ ಮಹಿಳೆ ಕಲ್ಲವ್ವ ರಕ್ಷಣೆ
* 2007 – ರಾಯಚೂರಿನ ಮಾನ್ವಿ – 8ರ ಪೋರ ಸಂದೀಪ್ ಸಾವು
* 2007 – ಕಲಬುರಗಿ – 5 ವರ್ಷದ ಬಾಲಕ ನವನಾಥ ರಕ್ಷಣೆ
* 2009 – ವಿಜಯಪುರ – 6 ವರ್ಷದ ಬಾಲಕಿ ಕಾಂಚನಾ ಸಾವು
* 2014 – ವಿಜಯಪುರ – 4 ವರ್ಷದ ಅಕ್ಷತಾ ಸಾವು
* 2014 – ಬಾಗಲಕೋಟೆ- 6 ವರ್ಷದ ಬಾಲಕ ತಿಮ್ಮಣ್ಣ ಸಾವು
* 2017 – ಗದಗ – ರೀಬೋರ್ ವೇಳೆ ಇಬ್ಬರ ಸಾವು

ನಾವು ಕಲಿಯಬೇಕಾದ ಪಾಠ ಏನು
– ಖಾಸಗಿ ಸ್ಥಳಗಳಲ್ಲಿ ಫೇಲ್ ಆದ ಬೋರ್‍ವೆಲ್‍ಗಳನ್ನು ಗ್ರಾಮ ಲೆಕ್ಕಾಧಿಕಾರಿ ಅಥವಾ ಪಿಡಿಓಗಳೇ ಖುದ್ದು ನಿಂತು ಮುಚ್ಚಿಸಬೇಕು.
– ಮುಚ್ಚಿದ ಬಳಿಕ ಗ್ರಾಮ ಪಂಚಾಯ್ತಿಯಿಂದ ಸರ್ಟಿಫಿಕೇಟ್ ತಗೋಬೇಕು
– ಇದು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಆಗಬೇಕು
– ತೆರೆದ ಕೊಳವೆ ಬಾವಿ ಮುಚ್ಚುವ ಬಗ್ಗೆ ಸರ್ಕಾರದಿಂದ ದೊಡ್ಡ ಅಭಿಯಾನ ಆಗಬೇಕು
– ಸರ್ಕಾರದ ಅಭಿಯಾನವನ್ನು ಜನರೇ ಎಚ್ಚೆತ್ತುಕೊಂಡು ಜನಾಂದೋಲನ ಮಾಡಬೇಕು
– ತೆರೆದ ಕೊಳವೆ ಬಾವಿ ಕಂಡರೇ ಜಮೀನಿನ, ಜಾಗದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು
– ಕೊಳವೆ ಬಾವಿ ಮುಚ್ಚದಿದ್ದರೆ ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳನ್ನೂ ಹೊಣೆ ಮಾಡಬೇಕು

ನಡೆದಿದ್ದೇನು?: ಅಜಿತ್ ಮಾದರ ಮತ್ತು ಸವಿತಾ  ದಂಪತಿ ಕೂಲಿ ಅರಸಿ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದರು. ಬೆಸಿಗೆ ಆರಂಭವಾದಾಗಿನಿಂದ ಕೆಲಸ ಸಿಗುವುದೂ ಕಡಿಮೆ ಆಗಿದೆ. ಹೀಗಾಗಿ ಅಜಿತ್ ಮಾದರ ಕೂಲಿ ಹುಡುಕಿಕೊಂಡು, ಸಿಕ್ಕಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಂತೆಯೇ ಬೆಳಗಾವಿಯಲ್ಲಿ ಬಂದು ಕುಟುಂಬ ನೆಲೆಸಿತ್ತು. ಹೆಂಡತಿ ಸವಿತಾ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು.

ಶನಿವಾರ ಸಂಜೆ ತೋಟದ ವಸತಿಯಲ್ಲಿ ದೊಡ್ಡ ಮಗಳು ಅನ್ನಪೂರ್ಣಾಳನ್ನು ಬಿಟ್ಟು, ಚಿಕ್ಕವರಾದ ಕಾವೇರಿ ಹಾಗೂ ಪವನ್‍ನನ್ನು ಕರೆದುಕೊಂಡು ಕಟ್ಟಿಗೆ ಆಯಲು ಬಂದಿದ್ದರು. ಈ ಹೊತ್ತಿನಲ್ಲಿ ಮಕ್ಕಳಿಬ್ಬರೂ ಹೊಲದ ದಾರಿಯ ಪಕ್ಕದಲ್ಲಿ ಆಡುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹೊಲವನ್ನು ಗಳೆ ಹೊಡೆದಿದ್ದರಿಂದ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಎದ್ದು ನಿಂತಿದ್ದವು. ಆ ಹೆಂಟೆಗಳ ನಡುವೆಯೇ ತೆರೆದ ಕೊಳವೆ ಬಾವಿ ಇರುವುದು ಮಕ್ಕಳಿಗೆ ತಿಳಿದಿರಲಿಲ್ಲ. ಆಡುತ್ತ ಹೋದ ಕಾವೇರಿ ಕಾಲು ಜಾರಿ ಬಿದ್ದಿದ್ದಳು. ಇದನ್ನು ಕಂಡ ಆಕೆಯ ತಮ್ಮ ಪವನ ಗಾಬರಿಯಿಂದ ಚೀರಿದ್ದ. ಮಗನ ದನಿ ಕೇಳುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ತಾಯಿಯ ಮುಂದೆ `ಅಕ್ಕ ಇದರಾಗ ಬಿದ್ಲು…’ ಎಂದು ಪವನ್ ಕುಣಿಯೊಂದನ್ನು ತೋರಿಸಿದ್ದಾನೆ. ಕೂಡಲೇ ಮಗಳ ರಕ್ಷಣೆಗೆ ಮುಂದಾದ ಸವಿತಾ, ಹಗ್ಗವೊಂದನ್ನು ಬಿಟ್ಟು ಕಾವೇರಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದರು.

 


Click to comment

Leave a Reply

Your email address will not be published. Required fields are marked *

Advertisement
Bengaluru City9 mins ago

ರಾಜ್ಯದಲ್ಲಿ ಇಳಿಕೆ ಕಂಡ ಕೊರೊನಾ ಪ್ರಕರಣ – ಇಂದು 783 ಕೇಸ್

Cinema20 mins ago

ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ

Latest1 hour ago

ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

Dakshina Kannada2 hours ago

ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ

Cinema2 hours ago

ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?

Latest2 hours ago

ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

Latest2 hours ago

ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

Districts2 hours ago

ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

Bengaluru City2 hours ago

ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು

Districts2 hours ago

ಕಾಡಾನೆ ಕಂಡು ಗಾಬರಿಯಾಗಿ ಮರಕ್ಕೆ ಕಾರು ಡಿಕ್ಕಿ ಹೊಡೆದ.!