ಬೆಳಗಾವಿ: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಬೆಳಗಾವಿ ಜಿಲ್ಲೆಯ 19 ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿದ್ದು, ಅದರಲ್ಲಿ ಇಬ್ಬರು ವಾಪಸ್ ಆಗಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಹೇಳಿದರು.
Advertisement
ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಜಿ.ಹಿರೇಮಠ್ ಅವರು, ರಾಜ್ಯ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ನಮಗೆ ಪಟ್ಟಿ ನೀಡಿದ್ದಾರೆ. ಆ ಪ್ರಕಾರ ಉಕ್ರೇನ್‍ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಇದ್ದರು. ಅದರಲ್ಲಿ ಈಗಾಗಲೇ ಇಬ್ಬರು ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. 17 ಜನರ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲ್ದಾರ್ ಗಳಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರ ಕೊಡ್ತೀವಿ: ಬೊಮ್ಮಾಯಿ
Advertisement
Advertisement
ವಿದ್ಯಾರ್ಥಿಗಳ ಪಾಲಕರ ಮನೆಗೆ ಹೋಗಿ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ನೀಡಿದ್ದೇವೆ. ನಾನೂ ಸಹ ಇಂದು ಕೆಲವು ವಿದ್ಯಾರ್ಥಿಗಳ ಪಾಲಕರನ್ನು ಭೇಟಿಯಾಗುವೆ. ರಾಯಭಾಗ ಮೂಲದ ವಿದ್ಯಾರ್ಥಿ ಪಾಲಕರ ಜೊತೆ ನಾನು ಮಾತನಾಡಿದ್ದೇನೆ. ಉಕ್ರೇನ್‍ನ ಪೂರ್ವ ಭಾಗದಲ್ಲೇ ಹೆಚ್ಚಿನ ಜನ ಇದ್ದಾರೆ. ಅಲ್ಲದೆ ಕೇಂದ್ರ ಸಚಿವರ ತಂಡ ಸಹ ಉಕ್ರೇನ್‍ಗೆ ಹೋಗಿದೆ ಎಂದು ವಿವರಿಸಿದರು.
Advertisement
ನಾವೆಲ್ಲರೂ ಸೇರಿ ಪೋಷಕರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಪಾಲಕರು ನೀಡಿದ ಮಾಹಿತಿ ರಾಜ್ಯ ನೋಡಲ್ ಅಧಿಕಾರಿಗಳಿಗೆ ನೀಡಿದ್ದೇವೆ. ಸ್ಮಾರ್ಟ ಸಿಟಿ ಎಂ.ಡಿ.ಪ್ರವೀಣ್ ಬಾಗೇವಾಡಿ, ಎ.ಸಿ.ರವಿ ಕರಲಿಂಗಣ್ಣವರ ಮುಂಬೈ ಏರ್ ಏರ್ ಪೋರ್ಟ್ ನಲ್ಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳ ಮಾಹಿತಿ ಪಡೆದು ಟಿಕೆಟ್ ಬುಕ್ ಮಾಡಿ ಸ್ವಂತ ಊರಿಗೆ ಕಳಿಸುವ ವ್ಯವಸ್ಥೆ ಮಾಡ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ