-ಶಾಸಕಿ ಬಣದಿಂದ ಮರಾಠಿ ಭಾಷಿಕ ಅಭ್ಯರ್ಥಿಗಳಿಗೆ ಮಣೆ
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಕೈ ನಾಯಕರ ಜಟಾಪಟಿಗೆ ಮತ್ತೊಂದು ಚುನಾವಣೆ ಸಾಕ್ಷಿಯಾಗಲಿದೆ. ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇದೇ 15ರಂದು ಘೋಷಣೆಯಾಗಿದೆ.
ಈ ಚುನಾವಣೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರಿಗೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಪಿಎಲ್‍ಡಿ ಬ್ಯಾಂಕ್ ಹಾಗೂ ಸ್ಥಳೀಯ ಚುನಾವಣೆಯ ಹೊಗೆ ಎರಡೂ ಬಣಗಳಲ್ಲಿ ಆಡುತ್ತಿದ್ದು, ಇದೇ ವೇಳೆ ಎಪಿಎಂಸಿ ಚುನಾವಣೆ ಘೋಷಣೆಯಾಗಿದೆ. ಇದನ್ನು ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಚಾಕು ಇರಿದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ
Advertisement
Advertisement
ಪಿಎಲ್‍ಡಿ ಬ್ಯಾಂಕ್ ಚುನಾವಣೆ ಬಳಿಕವೂ ಸ್ಥಳೀಯ ಚುನಾವಣೆಯಲ್ಲಿ ಕೈ ನಾಯಕರು ಪರೋಕ್ಷವಾಗಿ ಕಿಡಿಕಾರಿದ್ದರು. ಬೆಳಗಾವಿ ಕಾಂಗ್ರೆಸ್ ನಾಯಕರ ವಾಗ್ದಾಳಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ಈಗ ಎಪಿಎಂಸಿ ಚುನಾವಣೆ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಕೈ ನಾಯಕರು ಮತ್ತೆ ತಮ್ಮ ಹಳೇ ವರಸೆಯನ್ನು ಮುಂದುವರಿಸುತ್ತಾರೆ ಎನ್ನಲಾಗುತ್ತಿದೆ. ಇದನ್ನು ಓದಿ: ಎಲ್ಲವನ್ನು ಆ ದೇವ್ರು ನೋಡಿಕೊಳ್ತಾನೆ – ಗೆದ್ದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಚುಟುಕು ಮಾತು
Advertisement
Advertisement
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮರಾಠಿ ಭಾಷಿಕ ಯುವರಾಜ ಕದಂ, ಸುಧೀರ್ ಗಡ್ಡೆ ಅಭ್ಯರ್ಥಿಗಳಾಗಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರ ಬಣದಿಂದ ಯಾವುದೇ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ. ಇಬ್ಬರು ನಾಯಕರೂ ಸಂಧಾನ ಮಾಡಿಕೊಳ್ಳುತ್ತಾರೋ ಅಥವಾ ಮತ್ತೊಮ್ಮೆ ವಾಗ್ದಾಳಿಗೆ ಮುಂದಾಗುತ್ತಾರೋ ಎನ್ನುವುದು ಜಿಲ್ಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದನ್ನು ಓದಿ: ನಾನು ಸ್ಲಂನಲ್ಲಿ ಹುಟ್ಟಿರ್ಬೋದು, ಸಂಸ್ಕೃತಿ ಎಲ್ಲೆ ಮೀರಿ ಹೋಗಿಲ್ಲ- ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv