ತಿರುವನಂತಪುರಂ: ನನ್ನ ಅನುವಾದಕರಾಗಿರುವುದು ಬಹಳ ಅಪಾಯಕಾರಿ ಕೆಲಸ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi Speech Translate) ಹೇಳಿದ್ದಾರೆ.
ಕೋಝಿಕ್ಕೋಡ್‍ನಲ್ಲಿ ನಡೆದ ಪುಸ್ತಕ ಬಿಡುಗಡೆ (Book Releasing) ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಾತನಾಡಿದ ಅವರು, ತೆಲಂಗಾಣದಲ್ಲಿ (Telangana) ನಡೆದ ಚುನಾವಣಾ ರ‍್ಯಾಲಿಯ ಬಳಿಕದ ಭಾಷಣದಲ್ಲಿ ನಡೆದ ಅವಾಂತರವನ್ನು ಉಲ್ಲೇಖಿಸಿದರು. ಭಾಷಣವನ್ನು ಅನುವಾದ ಮಾಡುತ್ತಿದ್ದಾಗ ನಡೆದ ಎಡವಟ್ಟನ್ನು ತಿಳಿಸುತ್ತಾ, ನನ್ನ ಭಾಷಣ ಅನುವಾದ ಮಾಡುವುದು ಅಪಾಯಕಾರಿ ಕೆಲಸ ಎಂದು ಹಾಸ್ಯ ಮಾಡಿದ್ದಾರೆ.
ನಾನು ಹಿಂದಿಯಲ್ಲಿ 5 ಪದಗಳನ್ನು ಹೇಳಿದ ಒಂದು ವಾಕ್ಯ, ತೆಲುಗಿನಲ್ಲಿ 5 ರಿಂದ 7 ಪದಗಳಲ್ಲಿ ಮುಗಿಯುತ್ತದೆ ಎಂಬುದು ನನ್ನ ಭಾವನೆ. ಆದರೆ ಅಲ್ಲಿ ಅದಕ್ಕಿಂತ ಹೆಚ್ಚಾಗುತ್ತಿತ್ತು. 5 ಪದಗಳಲ್ಲಿರುವ ನನ್ನ ಒಂದು ವಾಕ್ಯವನ್ನು 20-30 ಪದಗಳಲ್ಲಿ ಹೇಳುತ್ತಿದ್ದರು. ಇದರಿಂದ ನನಗೆ ಅನುಮಾನ ಬಂತು ಎಂದು ಹೇಳುತ್ತಾ ರಾಹುಲ್ ಗಾಂಧಿ ನಕ್ಕರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ
ಕೆಲವೊಂದು ಸಲ ತುಂಬಾ ನೀರಸವಾಗಿರುವುದನ್ನು ಏನಾದರೂ ಹೇಳಿದರೆ ಜನ ಚಪ್ಪಾಳೆ ತಟ್ಟಿ ಕುಣಿಯುತ್ತಿದ್ದರು. ರೋಮಾಂಚನಕಾರಿಯಾಗಿರುವುದನ್ನು ಹೇಳಿದರೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನಂಗೆ ಕೋಪ ತರಿಸುವ ಬದಲು ನಗು ತರಿಸುವಂತೆ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೆಲವೊಮ್ಮೆ ಏನನ್ನೂ ಹೇಳಲು ಸಾಧ್ಯವಾಗದೆ ವೇದಿಕೆಯಲ್ಲಿದ್ದಾಗ ಪೂರ್ತಿ ನಗುತ್ತಲೇ ಇರಬೇಕಾಗುತ್ತದೆ ಎಂದು ಅವರು ಹೇಳಿದರು.
ನಡೆದ ಘಟನೆಯನ್ನು ವಿವರಿಸಿದ ನಂತರ, ಕಾಂಗ್ರೆಸ್ ನಾಯಕ ತನ್ನ ಸ್ನೇಹಿತ ಸಮದಾನಿ ಉತ್ತಮ ಭಾಷಾಂತರಕಾರ ಎಂದು ಹೇಳಿದರು. ಸಮದಾನಿಯವರಿಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದು ರಾಹುಲ್ ತಿಳಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇಂಡಿಯನ್ ಯೂನಿಯ್ ಮುಸ್ಲಿಂ ಲೀಗ್ (ಐಯುಎಂಎಲ್) ಸಂಸದ ಅಬ್ದುಸ್ಸಮದ್ ಸಮದಾನಿಯವರು ರಾಹುಲ್ ಗಾಂಧಿ ಭಾಷಣ ಅನುವಾದ ಮಾಡಿದ್ದಾರೆ.