– ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದ ಸಚಿವ
ಹಾಸನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ. ಸತ್ಯ ಇದ್ದರೆ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.
Advertisement
ಚನ್ನರಾಯಪಟ್ಟಣದಲ್ಲಿ ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯ ಇಲ್ಲದಿದ್ದಾಗ ನಾವೂ ಅವರ ತರಹ ಆಗಿಬಿಡ್ತೀವಿ. ಇಲ್ಲದಿದ್ದರೆ ಚೆಲುವರಾಯಸ್ವಾಮೀನೂ, ಕುಮಾರಸ್ವಾಮಿ ತರಹ ಆಗೋದ್ನಲ್ಲಾ ಅಂತಾರೆ ಜನ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹಾಸನದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ- ವಾಹನ ಸವಾರರ ಪರದಾಟ
Advertisement
Advertisement
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ, ಮಂತ್ರಿ ಆಗೋದು ಅಪರೂಪ. ಪೂರ್ವಜನ್ಮದ ಪುಣ್ಯದಿಂದ ಆಗಿದ್ದೇವೆ. ಅವರು ಎರಡು ಜನ ಗೆದ್ದು ಮಂತ್ರಿಯಾಗಿದ್ದಾರೆ. ಅವರಿಗೆ ಸಾಕಷ್ಟು ಕೆಲಸ ಇರುತ್ತೆ. ರಾಷ್ಟ್ರದಲ್ಲಿ ಮಂತ್ರಿಯಾಗಿರುವವರು ಶನಿವಾರ, ಭಾನುವಾರ ಇಲ್ಲಿಗೆ ಬಂದು ಬರೀ ಬಯ್ಯುವುದರಿಂದ ಅರ್ಥ ಇರದು ಎಂದು ಕುಟುಕಿದರು. ಸಿದ್ದರಾಮಯ್ಯ ಅವರು ಆರ್ಡಿನರಿ ಲೀಡರ್ ಅಲ್ಲ. ಸಣ್ಣಪುಟ್ಟ ವ್ಯತ್ಯಾಸ ಅಥವಾ ಯಾರೋ ಮಾಡಿದ ನಿರ್ಧಾರಕ್ಕೆ ಅವರನ್ನೇ ಹೊಣೆ ಮಾಡುವುದು ಅಪರಾಧ. ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಏನು ಮಾಡಿದ್ರು ಒಮ್ಮೆ ತಿರುಗಿ ನೋಡಲಿ ಎಂದರು. ಇದನ್ನೂ ಓದಿ: ಮಾಡಿರುವ ತಪ್ಪುಗಳು, ಹಗರಣವನ್ನು ಹೊರ ತೆಗೆಯುತ್ತೇವೆಂದು ಬಿಜೆಪಿಯವರಿಗೆ ಭಯ – ಜಿ. ಪರಮೇಶ್ವರ್
Advertisement
ನಮ್ಮ ಸರ್ಕಾರ ಬಂದು 14 ತಿಂಗಳಾಗಿವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಸೇರಿ ಹಲವು ಕೆಲಸ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಕೆಲವರನ್ನು ನೆಗ್ಲೆಟ್ ಮಾಡುವುದು ಅನಿವಾರ್ಯ. ನಮ್ಮ ಜೊತೆಯಲ್ಲಿರುವವರು ನಾವು ತಪ್ಪು ಮಾಡಿದ್ರೂ, ಒಳ್ಳೆಯದನ್ನೂ ಹೇಳಿದ್ರೂ ಚೆಪ್ಪಾಳೆ ಹೊಡೀತಾರೆ, ಹಾಗಾಗಿ ಕುಮಾರಸ್ವಾಮಿಗೆ ಖುಷಿ ಆಗಿದೆ ಎಂದರು. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ
ಕುಮಾರಸ್ವಾಮಿ, ಯಡಿಯೂರಪ್ಪ (B S Yediyurappa), ಬೊಮ್ಮಾಯಿ ಮೂರು ಜನ ಮುಖ್ಯಮಂತ್ರಿ ಆಗಿದ್ರು, ಅವರು ಕೊಟ್ಟ ಕಾರ್ಯಕ್ರಮದಿಂದ ರೊಚ್ಚಿಗೆದ್ದು ಜನ ಅವರನ್ನು ತಿರಸ್ಕರಿಸಿ ನಮಗೆ 136 ಜನ ಗೆಲ್ಲಿಸಿ ಕೊಟ್ಟಿದ್ದಾರೆ. 30 ವರ್ಷದಲ್ಲಿ 115 ಶಾಸಕರು ಒಂದೇ ಪಕ್ಷದಿಂದ ಆಯ್ಕೆಯಾಗಿಲ್ಲ. ನಾವು 136 ಜನ ಗೆದ್ದಿದ್ದರೂ ಸರ್ಕಾರ ತೆಗೆಯಲು ಒದ್ದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!
ಜಾತಿಗಣತಿ ಜಾರಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೆಲ ಸತ್ಯನಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವುದು ಕಷ್ಟ. ಸಮಯ ನೋಡಿ ಮಾತಾಡಬೇಕು. ಜಾತಿ ಗಣತಿ ವರದಿ ಜಾರಿಯಿಂದ ಆಗಬಾರದ್ದು ಏನೂ ಆಗಲ್ಲ. ಒಕ್ಕಲಿಗರು, ಲಿಂಗಾಯತರು ಜಾರಿ ಮಾಡುವುದು ಬೇಡ ಎಂದು ಅರ್ಜಿ ಕೊಟ್ಟಿದ್ದಾರೆ. ಆದರೆ ನನ್ನ ಪ್ರಕಾರ ಯಾರಿಗೂ ಅನ್ಯಾಯ ಆಗಲ್ಲ. ವರದಿ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಆಗುತ್ತೆ. ಅಲ್ಲಿ ಚರ್ಚೆ ಆಗುತ್ತೆ. ಅಂತಿಮವಾಗಿ ಸಿಎಂ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಯಾವ ಸಮಾಜಕ್ಕೂ ಅನ್ಯಾಯ ಆಗುವ ಅವಕಾಶ ಆಗಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?