ಬೀಜಿಂಗ್: 17 ತಿಂಗಳ ನಂತರ ಚೀನಾದ ಬೀಜಿಂಗ್ನಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಕಾರ್ಯಕ್ರಮಗಳು ಮತ್ತು ಇನ್ನಿತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
Advertisement
ಗುರುವಾರ ಒಂದೇ ದಿನ 7 ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಂಸ್ಥೆಗಳು ಸಮ್ಮೇಳನಗಳನ್ನು ರದ್ದುಗೊಳಿಸಬೇಕು. ಹೆಚ್ಚು ಜನರು ಒಂದೇ ಕಡೆ ಸೇರದಂತೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?
Advertisement
2020ರ ಜೂನ್ ನಂತರ ಕೋವಿಡ್ ಹೊಸ ಅಲೆಯಲ್ಲಿ 45 ಪ್ರಕರಣಗಳು ವರದಿಯಾಗಿವೆ. ನಾಲ್ಕನೇ ಅಲೆ ಹಾಗೂ ಡೆಲ್ಟಾ ರೂಪಾಂತರಿಯಿಂದಾಗಿ ಚೀನಾವು ಕಳೆದ 5 ತಿಂಗಳಿಂದ ಸಮಸ್ಯೆಯನ್ನು ಎದುರಿಸುತ್ತಿದೆ. ಇದನ್ನೂ ಓದಿ: ಚಿನ್ನದಂಗಡಿಗೆ ನುಗ್ಗಿದ ಹೆಬ್ಬಾವು – ಗ್ರಾಹಕರು, ಸಿಬ್ಬಂದಿ ಕಕ್ಕಾಬಿಕ್ಕಿ
Advertisement
Advertisement
ಹೊಸ ಅಲೆಯಿಂದಾಗಿ ಬೀಜಿಂಗ್ನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಬೀಜಿಂಗ್ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ದೊಡ್ಡಾಸ್ಪತ್ರೆಗಳು, ಶಾಪಿಂಗ್ ಮಾಲ್ಗಳನ್ನು ಬಂದ್ ಮಾಡಲಾಗಿದೆ.