ಗಾಂಧಿನಗರ: ಗುಜರಾತ್‍ನ (Gujarat) ವಡಾಲಿಯಲ್ಲಿ (Vadali) ಗುರುವಾರ (ಮೇ 2) ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಗುರುವಾರ ಮಧ್ಯಾಹ್ನ ಜೀತುಭಾಯಿ ಹೀರಾಭಾಯಿ ವಂಜಾರಾ (32) ಎಂಬವರ ಮನೆಗೆ ಪಾರ್ಸೆಲ್‍ನಲ್ಲಿ ಟೇಪ್ ರೆಕಾರ್ಡರ್ ಬಂದಿತ್ತು. ಈ ವೇಳೆ ಅದನ್ನು ತೆಗೆದು ವಿದ್ಯುತ್ ಸಂಪರ್ಕ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ಈ ವೇಳೆ ಜೀತುಭಾಯಿ ಹಾಗೂ ಅವರ ಮಗಳು ಭೂಮಿಕಾ (12) ಸಾವಿಗೀಡಾಗಿದ್ದರು. ಅಲ್ಲದೇ ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೈದು ಅತ್ತೆ ಕೊಲೆ – ಕುಸಿದು ಸತ್ತರೆಂದು ಕಥೆ ಕಟ್ಟಿದ್ದ ಸೊಸೆ ಅರೆಸ್ಟ್
Advertisement
ಪ್ರಕರಣದ ಹಿಂದೆ ಬಿದ್ದ ಪೊಲೀಸರು, ಸಿಸಿಟಿವಿಗಳಲ್ಲಿ ದಾಖಲಾದ ವೀಡಿಯೋ ಆಧಾರದ ಮೇಲೆ ಪಾರ್ಸೆಲ್ ತಲುಪಿಸಿದ್ದ ಆಟೋ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಟೋ ಚಾಲಕನನ್ನು ವಿಚಾರಿಸಿದಾಗ, ಜಯಂತಿಭಾಯಿ ಬಾಲುಸಿಂಗ್ ವಂಜಾರ (31) ಎಂಬಾತ ಜೀತುಭಾಯಿ ಅವರ ಮನೆಗೆ ಪಾರ್ಸೆಲ್ ಕಳುಹಿಸಿದ್ದು ಎಂದು ತಿಳಿದು ಬಂದಿದೆ.
Advertisement
Advertisement
ಜೀತುಭಾಯಿ ತನ್ನ ಮಾಜಿ ಪ್ರೇಯಸಿ ಮದುವೆಯಾಗಿದ್ದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆತ ಸ್ಫೋಟಕ ತಯಾರಿಸಲು ರಾಜಸ್ಥಾನದಿಂದ ಜೆಲೆಟಿನ್ ಕಡ್ಡಿಗಳನ್ನು ತಂದಿದ್ದ. ಅಲ್ಲದೇ ಅದನ್ನು ಟೇಪ್ ರೆಕಾರ್ಡ್‍ರ್‍ನಲ್ಲಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ ತಕ್ಷಣ ಸ್ಫೋಟಗೊಳ್ಳುವಂತೆ ಮಾಡಿದ್ದ ಎಂದು ತಿಳಿದು ಬಂದಿದೆ.
Advertisement
ಆರೋಪಿಯನ್ನು ಬಂಧಿಸಲಾಗಿದ್ದು ಪೊಲಿಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಪಿಐ ನಾಯಕ ಅತುಲ್ ಕುಮಾರ್ ಅಂಜಾನ್ ನಿಧನ