ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲಿವೆ ಎಂದು ಕೋವಿಡ್ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತಕ್ಕೆ ಈಗಾಗಲೇ ಕೊರೊನಾ 4ನೇ ಅಲೆ ಬಂದಿದ್ದು, ದೆಹಲಿ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯಕ್ಕೂ ಕೋವಿಡ್ 4ನೇ ಅಲೆ ಕಾಲಿಟ್ಟಿದೆ. ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಗುಣವಾದವರಿಗೆ ಕ್ಷಯ ರೋಗ: ಸುಧಾಕರ್
Advertisement
Advertisement
ಕೋವಿಡ್ 2, 3ನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿರುತ್ತೋ 4ನೇ ಅಲೆಯಲ್ಲೂ ಅದೇ ರೀತಿ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಪೀಡಿತರು, ಕ್ಯಾನ್ಸರ್ ರೊಗಿಗಳು, ನಿಶ್ಯಕ್ತಿಯುಳ್ಳವರು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದವರು, ಅಸ್ತಮಾ ರೋಗಿಗಳು ಹಾಗೂ ಇತರೇ ಕಾಯಿಲೆ ಇರುವವರು ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
Advertisement
Advertisement
ಕೊರೊನಾ ರೂಪಾಂತರವಾಗೋದು ಅದರ ಸಹಜ ಗುಣ, ಸ್ವಭಾವ ಕೂಡ. ಈಗ ಪತ್ತೆಯಾಗಿರುವ BA2.10, BA2.12 ಹೊಸ ತಳಿಯೇನಲ್ಲ. ಇದು ಮೊದಲಿನಿಂದಲೂ ಕಾಲಕಾಲಕ್ಕೆ ಬದಲಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 40-50ರ ಆಸುಪಾಸಿನಲ್ಲಿದ್ದ ಪ್ರಕರಣಗಳು 100ರ ಗಡಿ ದಾಟುತ್ತಿವೆ. ರಾಜ್ಯಕ್ಕೆ ಈಗಾಗಲೇ BA2.10, BA2.12 ವೈರಸ್ ಕಾಲಿಟ್ಟಿರುವ ಸಾಧ್ಯತೆಗಳಿವೆ. ಈ ಉಪತಳಿಗಳ ಗುಣಲಕ್ಷಣಗಳನ್ನು ತಿಳಿಯಲು ಅಧ್ಯಯನಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್ ಕೇಸ್ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45
ಕೋವಿಡ್ 4ನೇ ಅಲೆ ತಡೆಗೆ ಮಾಸ್ಕ್ ಅತ್ಯಗತ್ಯ, ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು. ಲಸಿಕೆ ಪೂರ್ಣವಾಗಿದೆ ಎಂದು ನಿರ್ಲಕ್ಷ್ಯ ಮನೋಭಾವ ತೋರಬಾರದು. ಜ್ವರ, ಕೆಮ್ಮು, ನೆಗಡಿಯಾದರೆ ನಿರ್ಲಕ್ಷ್ಯ ಮಾಡದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಮುಂದಿನ ವಾರಗಳಲ್ಲಿ 4ನೇ ಅಲೆ ಇರಲಿದ್ದು, ನಂತರ ಸಹಜವಾಗಿ ಕ್ಷೀಣಿಸುತ್ತದೆ ಎಂದು ಹೇಳಿದ್ದಾರೆ.