ಪಾಟ್ನಾ: ಇಂಟರ್ ನೆಟ್ ಜಗತ್ತಿನಲ್ಲಿ ಯಾರು ಬೇಕಾದ್ರೂ ರಾತ್ರೋ ರಾತ್ರಿ ಸ್ಟಾರ್ ಆಗಬಹುದು. ಒಂದು ವಿಡಿಯೋ ತುಣಕು ಎಷ್ಟೋ ಜನರನ್ನು ಇಂದು ಸ್ಟಾರ್ ಪಟ್ಟಕ್ಕೆ ಕರೆದುಕೊಂಡು ಹೋಗಿದೆ. 2019ರಲ್ಲಿ ರೈಲ್ವೇ ಪ್ಲಾಟ್ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಬಾಲಿವುಡ್ ಗಾಯಕಿಯಾಗಿದ್ದಾರೆ. ಅದೇ ರೀತಿ ಬಿಹಾರದ ಸನ್ನಿ ಬಾಬಾ ಎಂಬ ಭಿಕ್ಷುಕನ ಇಂಗ್ಲಿಷ್ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸನ್ನಿ ಗಾಯನಕ್ಕೆ ಫಿದಾ ಆಗಿದ್ದಾರೆ.
ವಂದನಾ ಎಂಬವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸನ್ನಿ ಬಾಬಾರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ರು ನೀವು ಏನ್ ಮಾಡ್ತೀರಿ ಎಂದು ಕೇಳುತ್ತಾರೆ. ಅಗ ಭಿಕ್ಷುಕ ನೀವು ಬೇಕಾದರೆ ಇಂಗ್ಲಿಷ್ ನಲ್ಲಿ ಕೇಳಬಹುದು ನಾನು ಉತ್ತರಿಸುತ್ತೇನೆ ಎಂದು ಹೇಳುತ್ತಾರೆ.
ತದನಂತರ ವ್ಯಕ್ತಿ ಇಂಗ್ಲಿಷ್ ನಲ್ಲಿ ಕೇಳುತ್ತಾ ಹೋದಂತೆ, ನಾನು ಸನ್ನಿ ಬಾಬಾ. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೇನೆ. ಮಧ್ಯಾಹ್ನ ಮತ್ತು ರಾತ್ರಿ ದೇವರು ಏನು ಕರುಣಿಸುತ್ತಾನೋ ಅದನ್ನ ತಿಂದು ಆನಂದವಾಗಿದ್ದೇನೆ. ಸಮಯ ಸಿಕ್ಕಾಗ ಹಾಡು ಹೇಳುತ್ತಾ ಡ್ಯಾನ್ಸ್ ಮಾಡುತ್ತೇನೆ ಎಂದು ಸನ್ನಿ ಬಾಬಾ ಹೇಳಿಕೊಂಡಿದ್ದಾರೆ. ಒಂದು ಹಾಡು ಹೇಳಿ ಅಂದಾಗ ಸನ್ನಿ ಬಾಬಾ ನಗುತ್ತಾ, ಹೊಸ ಗೀತೆಗಳು ನನಗಾಗಿ ಅಷ್ಟೊಂದು ಗೊತ್ತಿಲ್ಲ. ಹಾಗಾಗಿ ಹಳೆಯ ಹಾಡು ಹೇಳುತ್ತೇನೆ ಎಂದು ಹಾಡುತ್ತಾರೆ.
1960ರ ಕಾಲಘಟ್ಟದ ಪ್ರಸಿದ್ಧ ಗಾಯಕ ಜಿಮ್ ರೀವೆಸ್ ಹಾಡಿದ ಲವ್ ಮಿ ಬ್ಲೈಂಡ್ ಹಾಡು ಹೇಳಿದ್ದಾರೆ. ಇನ್ನು ಸನ್ನಿ ಹಾಡು ಕೇಳಿದ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
This man, a beggar from Patna sings Jim Reeves "He'll have to go".
Priceless ❤️ pic.twitter.com/lJdoRjrxMa
— Vandana ????????✍️???? (@VandanaJayrajan) April 20, 2020