ಭೋಪಾಲ್: ಬಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂ. ಮೌಲ್ಯದ ಮೊಪೆಡ್‍ನ್ನು ಖರಿದಿಸಿದ ಘಟನೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬ ಭಿಕ್ಷುಕ ಅಂಗವಿಕಲನಾಗಿದ್ದಾನೆ. ಈತನಿಗೆ ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು. ತನ್ನ ತ್ರಿಚಕ್ರ ವಾಹನವನ್ನು ಮುಂದಕ್ಕೆ ತಳ್ಳಲು ಪತ್ನಿ ಮುನ್ನಿ ಸಾಹು ಅವಳ ಸಹಾಯ ಪಡೆದುಕೊಳ್ಳುತ್ತಿದ್ದ. ಈ ರೀತಿಯಾಗಿಯೇ ಇಬ್ಬರು ಜೊತೆಗೆ ಭಿಕ್ಷೆ ಬೇಡುತ್ತಿದ್ದರು.
Advertisement
Advertisement
ಹದಗೆಟ್ಟ ರಸ್ತೆಗಳು ಮತ್ತು ಹವಾಮಾನ ವೈಪ್ಯರೀತ್ಯದಿಂದಾಗಿ ಭಿಕ್ಷೆ ಕೇಳಲು ಇಬ್ಬರು ಆಗಾಗ ತೊಂದರೆ ಆಗುತ್ತಿತ್ತು. ಅಷ್ಟೇ ಅಲ್ಲದೇ ದಿನವಿಡೀ ತ್ರಿಚಕ್ರವಾಹನವನ್ನು ತಳ್ಳಬೇಕಾಗಿರುವುದರಿಂದ ಆತನ ಪತ್ನಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಈ ಹಿನ್ನೆಲೆಯಲ್ಲಿ ಸಂತೋಷ್ ಮೊಪೆಡ್ ಖರೀದಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್ ಹೇಳಿದ್ದೇ ಅಂತಿಮ: ಪರಿಷತ್ ಟಿಕೆಟ್ ಬಗ್ಗೆ ಡಿಕೆಶಿ ಮಾತು
Advertisement
Advertisement
ಪ್ರತಿನಿತ್ಯ ವಾಹನಕ್ಕಾಗಿ ಹಣ ಉಳಿಸಲು ಪ್ರಾರಂಭಿಸಿದರು. ದಂಪತಿ ಬಸ್ ನಿಲ್ದಾಣಗಳು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಪ್ರತಿದಿನ ಸುಮಾರು 300 ರಿಂದ 400 ರೂ.ಗಳನ್ನು ಸಂಪಾದಿಸುತ್ತಿದ್ದರು. ಅಷ್ಟೇ ಅಲ್ಲದೇ ಊಟವನ್ನು ಅಲ್ಲೇ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಮಾಡಿ 90 ಸಾವಿರ ನಗದು ಸಂಗ್ರಹಿಸಿ ಮೊಪೆಡ್ ಖರೀದಿಸಿದ್ದಾರೆ. ಈಗ, ದಂಪತಿ ಭಿಕ್ಷೆ ಕೇಳುತ್ತಾ ಮೊಪೆಡ್‍ನಲ್ಲಿ ಚಲಿಸುತ್ತಾರೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು