ಬೆಂಗಳೂರು: ಮೂತ್ರ ವಿಸರ್ಜನೆಗೆ ತೆರಳಿದ್ದ ಭಿಕ್ಷುಕ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಷರೀಫ್ ಸಾಬ್ (75) ಮೃತ ಪಟ್ಟ ಭಿಕ್ಷುಕ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಷರೀಫ್ ಸಾಬ್ ಮೂತ್ರ ವಿಸರ್ಜನೆಗೆ ತೆರಳಿದ್ದು, ಆ ವೇಳೆ ಅಲ್ಲೇ ಸಾವ್ನಪ್ಪಿದ್ದಾರೆ. ಸ್ಥಳೀಯರು ಷರೀಫ್ ಸಾಬ್ ದೇಹವನ್ನು ಗಮನಿಸಿದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಷರೀಫ್ ಸಾಬ್ ಮೃತ ಪಟ್ಟಿರುವುದು ಖಚಿತವಾಗಿದೆ. ಅಲ್ಲದೇ ಅವರ ಬಳಿ ಕಂತೆ ಕಂತೆ ಹಣ ಇರುವುದು ಕೂಡ ಪತ್ತೆಯಾಗಿದೆ.
Advertisement
Advertisement
ಕಳೆದ 15 ವರ್ಷಗಳಿಂದ ರೈಲ್ವೆ ಕಂಟೋನ್ಮೆಂಟ್ ನಿಲ್ದಾಣದ ಬಳಿಯೇ ಷರೀಫ್ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಆದರೆ ಅವರಿಗೆ ಕಾಲಿಗೆ 5 ವರ್ಷಗಳ ಹಿಂದೆ ಗ್ಯಾಗ್ರೀನ್ ನಿಂದ ಕಾಲು ತೆಗೆಯಲಾಗಿತ್ತು. ಬಳಿಕ ಅವರಿಗೆ ಕೃತಕ ಕಾಲು ಅಳವಡಿಸಲಾಗಿತ್ತು. ಸದ್ಯ ಕೃತಕವಾಗಿ ಅಳವಡಿಸಿದ್ದ ಕಾಲಿನಲ್ಲಿ ಹಣ ಪತ್ತೆಯಾಗಿದೆ. ಷರೀಫ್ ಸಾಬ್ ಬಳಿ ಬರೋಬ್ಬರಿ 96 ಸಾವಿರ ರೂ. ಪತ್ತೆಯಾಗಿದ್ದಾಗಿ ಮಾಹಿತಿ ಲಭಿಸಿದ್ದು, ಸ್ಥಳದ ಪಂಚನಾಮೆ ನಡೆಸಿದ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ.
Advertisement
ಈ ಘಟನೆ ಕುರಿತು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv