ಚೆನ್ನೈ:ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ಈಗ ತಮಿಳುನಾಡಿನಲ್ಲಿ ಮರುಕಳಿಸಿದೆ. ಪಳನಿಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆ ಶಾಸಕರು ಫೈಲ್‍ಗಳನ್ನು ಸ್ಪೀಕರ್ ಮೇಲೆ ಎಸೆದು ಕೋಲಾಹಲ ಸೃಷ್ಟಿಸಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.
Advertisement
ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.
Advertisement
ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.
Advertisement
ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನದವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.
Advertisement
ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.
#WATCH DMK MLAs scuffle with TN Assembly speaker, protesting DMK MLA Ku Ka Selvam sat on speaker chair #floortest (Jaya TV) pic.twitter.com/CkMQY9FfQx
— ANI (@ANI_news) February 18, 2017
DMK protest in TN assembly earlier today, MLAs snatch Speaker's mic and throw paper #floortest (Jaya TV) pic.twitter.com/3pGfUpAF3G
— ANI (@ANI_news) February 18, 2017