ನವದೆಹಲಿ: ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾದರು.
ದೆಹಲಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೊಂಗಿಯಾ(44) ಅವರು ಭಾಗವಾಯಿಸಿದ್ದು, ಈ ವೇಳೆ ಕೇಂದ್ರದಲ್ಲಿ ಆಡಳಿತ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯದ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದಾರೆ.
Advertisement
Advertisement
ಈ ವೇಳೆ ಪಂಜಾಬ್ ನ ಮೂವರು ಶಾಸಕರಾದ ಫತೇ ಜಂಗ್ ಬಾಜ್ವಾ, ಬಲ್ವಿಂದರ್ ಸಿಂಗ್ ಲಡ್ಡಿ ಮತ್ತು ರಾಣಾ ಗುರ್ಮೀತ್ ಸೋಧಿ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ
Advertisement
ದಿನೇಶ್ ಮೊಂಗಿಯಾ ಅವರು ದಿಢೀರ್ ಎಂದು ಬಿಜೆಪಿ ಸೇರಿದ ಬೆನ್ನಲ್ಲೇ, ಇನ್ನೆನ್ನು ಸ್ವಲ್ಪ ತಿಂಗಳಲ್ಲೆ ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದೆ ಅದಕ್ಕೆ ಅವರು ಸೇರಿಕೊಂಡಿದ್ದಾರೆ ಎಂಬ ಸುದ್ದಿಯು ಸಹ ಕೇಳಿಬರುತ್ತಿದೆ.
Advertisement
ಮಾಜಿ ಕ್ರಿಕೆಟಿಗರು ಚುನಾವಣೆಗೂ ಮುನ್ನ ರಾಜಕೀಯ ಪಕ್ಷ ಸೇರುವುದು ಸಾಮಾನ್ಯವಾಗಿದೆ. ಈ ಹಿಂದೆಯೂ 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ಅವರು ಆಮ್ ಆದ್ಮಿ ಪಕ್ಷದ ಪ್ರತಿಸ್ಪರ್ಧಿ ಅತಿಶಿ ಅವರನ್ನು ಸೋಲಿಸಿದ್ದರು. ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ – ಕೇಂದ್ರ ಸರ್ಕಾರ ಮಧ್ಯಸ್ಥಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ