ಬೆಂಗಳೂರು: ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಹಣ ಪೀಕುತ್ತಿದ್ದ ವ್ಯಕ್ತಿಯೊಬ್ಬನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಕುಮಾರ್ ರಾಯ್ ಬಂಧಿತ ಆರೋಪಿ. ಕೆಲಸ ಸಿಗುವುದಾಗಿ ಹಣ ಕೊಟ್ಟು ಮೋಸಕ್ಕೊಳಗಾದ ನಿರುದ್ಯೋಗಿಯೊಬ್ಬರು ಸಿಐಡಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಐಡಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
Advertisement
Advertisement
ಮೋಸ ಹೇಗೆ ಮಾಡ್ತಿದ್ದ?
ಅನಿಲ್ ಕುಮಾರ್ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ಅವರಿಂದಲೇ ನಿರುದ್ಯೋಗಿಗಳಿಗೆ ಕರೆ ಮಾಡಿಸುತ್ತಿದ್ದ. ಈ ಕೆಲಸಕ್ಕೆ ಪ್ರೀತಿ ಹೆಸರಿನ ಇಬ್ಬರು ಯುವತಿಯರು ಹಾಗೂ ರಾಧಿಕಾ ಎಂಬ ಒಬ್ಬ ಯುವತಿಯನ್ನು ಇಟ್ಟುಕೊಂಡಿದ್ದನು.
Advertisement
ಕಳೆದ ತಿಂಗಳು 10 ರಂದು ನಿರುದ್ಯೋಗಿಯೊಬ್ಬರಿಗೆ ಈ ಯುವತಿಯರು ಕರೆ ಮಾಡಿ ಏರ್‍ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸವಿದೆ. ನಿಮಗೆ ಕೊಡಿಸುತ್ತೇವೆ ಎಂದು ಹೇಳಿ ಬಲೆ ಬೀಸಿದ್ದಾರೆ. ದಾಖಲಾತಿ ಪರಿಶೀಲನೆಗಾಗಿ 6,400 ರೂ. ಜಾಬ್ ಕನ್ಫರ್ಮೇಶನ್ ಫೀಸ್ 11,700 ರೂ., ಐಡಿ ಆಕ್ಟಿವೇಷನ್‍ಗೆ 43,6500 ರೂ., ಕನ್ಸಲ್ಟೆನ್ಸಿ ಸೇವೆಗೆ 52,400 ರೂ., ಅಧಿಕಾರಿಗಳ ಸಹಿಗಾಗಿ 65,900 ರೂ. ಹಾಗೂ ಜಿಎಸ್‍ಟಿ ಚಾರ್ಜಸ್ 68,642 ರೂ. ಒಟ್ಟಾರೆ ಸೇರಿ 7,19,360 ರೂ. ಕೇಳಿದ್ದಾರೆ.
Advertisement
ಕೆಲಸ ಸಿಗುತ್ತದೆ ಎಂಬ ಆಸೆಯಿಂದ ನಿರುದ್ಯೋಗಿ ಅನಿಲ್ ಕುಮಾರ್ ರಾಯ್ ಎಂಬುವರ ಹೆಸರಿನ ಅಕೌಂಟ್‍ಗೆ ಹಣವನ್ನು ಜಮಾ ಮಾಡಿದ್ದಾರೆ. ಆದರೆ ಹಣ ಅವರ ಖಾತೆಗೆ ಬಂದ ತಕ್ಷಣ ಯಾವುದೇ ಕರೆಯನ್ನೂ ಕೂಡ ಮಾಡಿಲ್ಲ. ಇತ್ತ ನಿರುದ್ಯೋಗಿ ಕಾದು ಕಾದು ಅನುಮಾನಗೊಂಡು ಈ ಕುರಿತು ಸಿಐಡಿಗೆ ದೂರು ನೀಡಿದ್ದರು.