ತುಮಕೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರನ್ನು ಒಲೈಸಲು ರಾಜಕೀಯ ನಾಯಕರು ಮುಂದಾಗಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತುಮಕೂರಿನಲ್ಲಿ ಚುನಾವಣೆಗೆ ಮುನ್ನವೇ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗೋವಿಂದರಾಜು ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಾಗೂ ಹಣವನ್ನು ಕೊಡುವುದಲ್ಲದೇ ಮತದಾರರನ್ನು ಗುಬ್ಬಿ ದೇವರಾಯನ ದುರ್ಗ ದೇವಾಲಯಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣಗಳನ್ನು ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೇ ರೀತಿ ತುಮಕೂರು ನಗರದ ಕುರಿಪಾಳ್ಯದ ಮಹಿಳೆಯರನ್ನು ಕರೆದುಕೊಂಡು ಹೋಗಲು ಬಸ್ ಬಂದಾಗ ಸ್ಥಳೀಯರು ಇದನ್ನು ತಿರಸ್ಕರಿಸಿ ಬಸ್ ವಾಪಸ್ ಕಳುಹಿಸಿರುವ ಮಾಹಿತಿ ಲಭಿಸಿದೆ.