ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ

Public TV
1 Min Read
BEETROOT JUICE 2

ಬೀಟ್‌ರೂಟ್ ಅನ್ನು ನಮ್ಮ ನಿತ್ಯದ ಆಹಾರದಲ್ಲಿ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತ ಹೆಚ್ಚುವುದಲ್ಲದೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀರಿನಂಶ ಹೊಂದಿರುವ ಪಾನೀಯ ಮತ್ತು ವಸ್ತುಗಳನ್ನು ತಿನ್ನುವುದರಿಂದ ಅಥವಾ ಕುಡಿಯುವುದರಿಂದ ನಮ್ಮ ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಬಹುದು. ಇವತ್ತಿನ ರೆಸಿಪಿಯಲ್ಲಿ ಬೀಟ್‌ರೂಟ್ ಜ್ಯೂಸ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

BEETROOT JUICE 1

ಬೇಕಾಗುವ ಸಾಮಗ್ರಿಗಳು:
ತುರಿದ ಬೀಟ್‌ರೂಟ್ – 1 ಕಪ್
ನಿಂಬೆ ಹಣ್ಣಿನ ರಸ – ಅರ್ಧ ನಿಂಬೆ
ಜೇನುತುಪ್ಪ – ಒಂದೂವರೆ ಚಮಚ
ಉಪ್ಪು – ಒಂದು ಚಿಟಿಕೆ
ಕಾಳುಮೆಣಸಿನ ಪುಡಿ – ಅರ್ಧ ಚಮಚ
ತುರಿದ ಶುಂಠಿ – ಸ್ವಲ್ಪ

BEETROOT JUICE

ಮಾಡುವ ವಿಧಾನ:
*ಮೊದಲಿಗೆ ಒಂದು ಮಿಕ್ಸರ್ ಜಾರಿಗೆ ತುರಿದ ಬೀಟ್‌ರೂಟ್, ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆರಸವನ್ನು ಹಾಕಿಕೊಳ್ಳಿ.
*ಈಗ ಇದಕ್ಕೆ ಅರ್ಧ ಗ್ಲಾಸ್ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
*ಬಳಿಕ ಇದನ್ನು ಸೋಸಬೇಕು. ನಂತರ ಒಂದು ಗ್ಲಾಸ್‌ಗೆ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಇದಕ್ಕೆ ಸೋಸಿದ ಬೀಟ್‌ರೂಟ್ ಜ್ಯೂಸ್ ಅನ್ನು ಹಾಕಿ ಕುಡಿಯಲು ಕೊಡಿ.
*ಇದು ಶುಗರ್ ಪೇಷೆಂಟ್‌ಗಳು ಮಾತ್ರವಲ್ಲದೇ ರಕ್ತಹೀನತೆಯಿಂದ ಬಳಲುವವರು ಕುಡಿಯಬಹುದಾದ ಒಂದು ಉತ್ತಮ ಪಾನೀಯವಾಗಿದೆ. ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

Web Stories

Share This Article