ಅತಿಥಿಗಳು ಮನೆಗೆ ಬಂದಾಗ ನಾವು ಹೆಚ್ಚಾಗಿ ಸಿಹಿ ತಿಂಡಿಗಳನ್ನು ಮಾಡುತ್ತೇವೆ. ದಿಢೀರ್ ಎಂದು ಅತಿಥಿಗಳು ಮನೆಗೆ ಬಂದ ಸಂದರ್ಭ ಏನು ಸ್ಪೆಷಲ್ ಮಾಡುವುದು ಎಂಬ ಆತಂಕ ಎಲ್ಲರಿಗೂ ಮೂಡುತ್ತದೆ. ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ರುಚಿಯಾದ ಬೀಟ್‌ರೂಟ್ ಹಲ್ವಾ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಖಂಡಿತವಾಗಿಯೂ ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಇದು ಇಷ್ಟವಾಗುವುದಲ್ಲದೇ ಮಾಡಲು ಸಹಾ ತುಂಬಾ ಸುಲಭ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ
Advertisement
ಬೇಕಾಗುವ ಸಾಮಗ್ರಿಗಳು:
ಬೀಟ್‌ರೂಟ್ – 4
ಹಾಲು – 2 ಕಪ್
ಸಕ್ಕರೆ – 2 ಕಪ್
ಏಲಕ್ಕಿ ಪುಡಿ – 1 ಚಮಚ
ತುಪ್ಪ – 3 ಚಮಚ
ಗೋಡಂಬಿ – ಸ್ವಲ್ಪ
ಒಣ ದ್ರಾಕ್ಷಿ – ಸ್ವಲ್ಪ
ಬಾದಾಮಿ – ಸ್ವಲ್ಪ
ಕೋವಾ – 100 ಗ್ರಾಂ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೀಟ್‌ರೂಟ್ ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ತುರಿದುಕೊಳ್ಳಿ.
* ಈಗ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಗೋಡಂಬಿ, ಬಾದಾಮಿ ಹಾಗೂ ಒಣದ್ರಾಕ್ಷಿಗಳನ್ನು ಹಾಕಿಕೊಂಡು ಸ್ವಲ್ಪಹೊತ್ತು ಹುರಿದುಕೊಳ್ಳಿ. ನಂತರ ಅದನ್ನು ಬಾಣಾಲೆಯಿಂದ ತೆಗೆದು ಒಂದು ತಟ್ಟೆಯಲ್ಲಿ ಹಾಕಿ ಪಕ್ಕಕ್ಕಿಡಿ.
* ಬಳಿಕ ಅದೇ ಬಾಣಾಲೆಗೆ ತುರಿದ ಬೀಟ್‌ರೂಟ್ ಅನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಚನ್ನಾಗಿ ಹುರಿದುಕೊಳ್ಳಿ.
* ನಂತರ ಅದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ. ಬಳಿಕ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಹೆಚ್ಚಿನ ರುಚಿಗಾಗಿ ಮಂದ ಹಾಲನ್ನು ಹಾಕಿ ಬೇಯಿಸಿಕೊಳ್ಳಿ. ಬಳಿಕ ಇದನ್ನು ಒಂದು ಬೌಲ್‌ಗೆ ಹಾಕಿಕೊಂಡು ಗೋಡಂಬಿ, ಬಾದಾಮಿ ಹಾಗೂ ಒಣದ್ರಾಕ್ಷಿಗಳಿಂದ ಅಲಂಕರಿಸಿ ಸವಿಯಲು ಕೊಡಿ. ಇದನ್ನೂ ಓದಿ: ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ
Advertisement