ಟಾಯ್ಲೆಟ್‌ ನೀರು ಮರುಬಳಸಿ ತಯಾರಿಸಿದ ಬಿಯರ್‌ ಸೂಪರ್‌ ಎಂದ ಮದ್ಯಪ್ರಿಯರು!

Public TV
1 Min Read
beer alcohol hall excise duty

ಸಿಂಗಾಪುರ್: ಬಿಯರ್‌ ಹೊಸ ಬ್ರ್ಯಾಂಡ್‌ವೊಂದು ಸಿಂಗಾಪುರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿಶೇಷ ಬ್ರ್ಯಾಂಡ್‌ನ ಬಿಯರ್‌ ಸಿಂಗಾಪುರ ಮದ್ಯಪ್ರಿಯರ ಮನಗೆದ್ದಿದೆ.

ಬ್ರಿಯರ್‌ ಬ್ರ್ಯಾಂಡ್‌ ಹೆಸರು ʼನ್ಯೂಬ್ರೂʼ (NEWBrew). ಶೌಚ ನೀರನ್ನು ಮರುಬಳಸಿ ಕುಡಿಯುವ ನೀರಾಗಿ ಸಂಸ್ಕರಿಸಿ ಈ ಬಿಯರ್‌ ತಯಾರಿಸಲು ಬಳಸಲಾಗುತ್ತದೆ. ಹೊಸ ಬ್ರ್ಯಾಂಡ್‌ನ ಬಿಯರ್‌ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಮದ್ಯಪ್ರಿಯರು ಆಸಕ್ತಿಯಿಂದ ಕೊಳ್ಳುತ್ತಿದ್ದಾರೆ. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

Singapore Skyline

ಆಲ್ಕೊಹಾಲ್‌ಯುಕ್ತ ಪಾನೀಯವು ದೇಶದ ರಾಷ್ಟ್ರೀಯ ಜಲ ಸಂಸ್ಥೆ, PUB ಮತ್ತು ಸ್ಥಳೀಯ ಕ್ರಾಫ್ಟ್ ಬ್ರೂವರಿ ಬ್ರೂವರ್ಕ್ಜ್ ಸಹಯೋಗದಲ್ಲಿ ತಯಾರಿಸಲ್ಪಟ್ಟಿದೆ. ʼನ್ಯೂಬ್ರೂʼ ಏಪ್ರಿಲ್‌ನಿಂದ ಸೂಪರ್‌ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಇದನ್ನು ಟಾಯ್ಲೆಟ್‌ ನೀರನ್ನು ಮರುಬಳಸಿ ತಯಾರಿಸಲಾಗಿದೆ ಎಂದು ಸ್ಪಷ್ಟವಾಗಿ ನಂಬಲು ಸಾಧ್ಯವಾಗಲಿಲ್ಲ ಎಂದು ಗ್ರಾಹಕ ಚೆವ್ ವೀ ಲಿಯಾನ್ ಹೇಳಿದ್ದಾರೆ. ಸೂಪರ್‌ ಮಾರುಕಟ್ಟೆಯಲ್ಲಿ ಹೊಸ ಬ್ರ್ಯಾಂಡ್‌ನ ಬಿಯರ್‌ ಖರೀದಿಸಿದ ಅವರು, ಇದು ಸಾಮಾನ್ಯವಾಗಿ ಇತರೆ ಬಿಯರ್‌ಗಳಂತೆಯೇ ರುಚಿ ಹೊಂದಿದೆ. ನನಗೆ ಬಿಯರ್‌ ಅಂದರೆ ಇಷ್ಟ ಎಂದು ತಿಳಿಸಿದ್ದಾರೆ.

beer

ಕೊಳಚೆ ನೀರನ್ನು ಕುಡಿಯುವ ನೀರಾಗಿ ಸಂಸ್ಕರಿಸುವ ಪರಿಕಲ್ಪನೆಗೆ ಆರಂಭದಲ್ಲಿ ವ್ಯಾಪಕ ವಿರೋಧವಿತ್ತು. ಕಳೆದ ದಶಕದಲ್ಲಿ ಪ್ರಪಂಚದಾದ್ಯಂತ ಶುದ್ಧ ನೀರಿನ ಪೂರೈಕೆ ತೊಂದರೆ ಎದುರಾಗಿತ್ತು. ಈ ವೇಳೆ ಸಂಸ್ಕರಿಸಿದ ನೀರಿಗೆ ಬೆಂಬಲ ವ್ಯಕ್ತವಾಯಿತು.

ನಾನಾ ಬ್ರ್ಯಾಂಡ್‌ ಬಿಯರ್‌ಗಳು ಮಾರುಕಟ್ಟೆಯಲ್ಲಿದ್ದು, ಇದು ವಿಶೇಷ ಎಂದು ನಮಗೆ ಮನವರಿಕೆಯಾಗುವುದಿಲ್ಲ. ಬಿಯರ್‌ ಬೇಕೆನಿಸಿದರೆ, ಸಾಮಾನ್ಯ ನೀರಿನಿಂದ ತಯಾರಿಸಿದ ಯಾವುದನ್ನಾದರೂ ಆರಿಸಿಕೊಳ್ಳುತ್ತೇನೆ ಎಂದು ಸಿಂಗಾಪುರದ ವಿದ್ಯಾರ್ಥಿ ಲೋ ಯು ಚೆನ್ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಬೆಲೆಯ ಪನ್ನೀರ್ – ಕೆಜಿಗೆ 80 ಸಾವಿರ ರೂಪಾಯಿ

Live Tv

Share This Article
Leave a Comment

Leave a Reply

Your email address will not be published. Required fields are marked *