ಮುಂಬೈ: ಬಿಯರ್ ಕೇವಲ ಜ್ಯೂಸ್ ಅಷ್ಟೇ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದು ಹೇಳಿದ್ದಾರೆ.
`ಬ್ರೇಕ್ ಫಸ್ಟ್ ವಿಥ್ ಚಾಂಪಿಯನ್’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟರನ್ನು ಆತ ಕುಡಿಯುವ ಬಿಯರ್ ನಿಂದ ಆತನ ಸಾಮರ್ಥ್ಯನ್ನು ತೀರ್ಮಾನಿಸಬಾರದು, ಆತ ಮೈದಾನದಲ್ಲಿ ನೀಡುವ ಪ್ರದರ್ಶನದ ಮೇಲೆ ಆತನನ್ನು ಅಳೆಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಹಳೆಯ ದಿನಗಳ ಕುರಿತು ನೆನಪು ಮಾಡಿಕೊಂಡ ಅವರು, ತಮ್ಮ ತಂದೆಯೊಂದಿಗೆ ಕುಳಿತು ಬಿಯರ್ ಸೇವಿಸುತ್ತಿದ್ದೆ. ನಾನು ವಿಶ್ವದಲ್ಲಿ ಹೆಚ್ಚು ಗೌರವ ನೀಡುವ ವ್ಯಕ್ತಿ ಎಂದರೆ ಅದು ನಮ್ಮ ತಂದೆ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ನಡೆದ ಸಂಭಾಷಣೆಯು 14 ನಿಮಿಷದಿಂದ ಈ ಕುರಿತು ಮಾತುಕತೆ ನಡೆಯುತ್ತದೆ. ಮೊದಲ ಬಾರಿ ತಾನು ಬಿಯರ್ ಸೇವಿಸಿ 17 ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದೆ. ಆದರೆ ಈ ವೇಳೆಯೂ ತಾನು ಆ ಕುರಿತು ನಿಜ ಹೇಳಿದ್ದು, ಉತ್ತಮ ಪ್ರದರ್ಶನ ನೀಡದಿದ್ದರೆ ತಂಡದಿಂದ ಹೊರ ಹಾಕುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ.
ತಮ್ಮ ಜೀವನದ ಹಲವು ಪ್ರಮುಖ ಕ್ಷಣ ಬಗ್ಗೆ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟ ಅವರು, ಕ್ರಿಕೆಟ್ ನಲ್ಲಿ ತಾನು ಆರಂಭಿಕನಾಗಿ ಆಡಲು ಇಷ್ಟ ಪಟ್ಟಿದ್ದೆ. ಆದರೆ ನಾನು ಮೊದಲ ಬಾರಿ ಆರಂಭಿಕನಾಗಿ ಬ್ಯಾಟಿಂಗ್ ನಡೆಸಿದ ವೇಳೆ ಶೂನ್ಯಕ್ಕೆ ಔಟ್ ಆಗಿದ್ದೆ, ಬಳಿಕ ನಡೆದ ಪಂದ್ಯದಲ್ಲಿ 70 ಪ್ಲಸ್ ಗಳಿಸಿದ್ದೆ ಎಂದು ಹಳೆ ನೆನಪನ್ನು ಹಂಚಿಕೊಂಡಿದ್ದಾರೆ.