ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲಿನಲ್ಲಿ (Non Veg Hotel) ಕುರಿ ಬದಲು ದನದ ಮಾಂಸ (Beef Meat) ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗಲೇ ಪೊಲೀಸರು (Police) ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಈ ಎರಡು ಹೋಟೆಲ್‍ನಲ್ಲಿ ಊಟ ಮಾಡಿದ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಐದು ಕೆಜಿ ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿ ಕಾಲೇಜು ಲೇಡಿಸ್ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್ – ಗುಜರಾತ್ FSLಗೆ ಮೊಬೈಲ್ ರವಾನೆ
Advertisement
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್ ಅಡುಗೆ ಮಾಡುತ್ತಿದ್ದಾರೆ.
Advertisement
ಕುರಿ ಮಟನ್ ಕೆ.ಜಿ.ಗೆ 700-800 ರೂ. ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂ. ಸಿಗುತ್ತದೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ 5 ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
Advertisement
Web Stories