ಜೇನುನೊಣಗಳಿಗೆ ಕ್ರಿಕೆಟಿಗರು, ಅಂಪೈರ್ ಸಾಷ್ಟಾಂಗ ನಮಸ್ಕಾರ

Public TV
1 Min Read
Bee

ರಿವರ್ ಸೈಡ್ ಗ್ರೌಂಡ್: ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಅತಿ ವಿಶೇಷ ಆತಿಥಿಗಳು ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಅಂಪೈರ್ ಗಳು ಗಳು ಹಾಗೂ ಕ್ರಿಕೆಟಿಗರು ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.

ರಿವರ್ ಸೈಡ್ ಗ್ರೌಂಡ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್ ನ 47ನೇ ಓವರ್ ವೇಳೆ ಮೈದಾನಕ್ಕೆ ಜೇನುನೊಣಗಳು ಆಗಮಿಸಿದವು. ಇದರಿಂದಾಗಿ ಕ್ರಿಕೆಟಿಗರು ಹಾಗೂ ಅಂಪೈರ್ ಗಳು ಬೇರೆ ದಾರಿ ಇಲ್ಲದೆ ಮೈದಾನದಲ್ಲಿಯೇ ಸಾಷ್ಟಾಂಗ ಹಾಕಿದರು.

ಅದೃಷ್ಟವಶಾತ್ ಜೇಣು ನೊಣಗಳು ಯಾರಿಗೂ ಕಚ್ಚದೆ, ಕೆಲವೇ ನಿಮಿಷಗಳಲ್ಲಿ ಮೈದಾನದಿಂದ ಹೊರ ನಡೆದವು. ಬಳಿಕ ಪಂದ್ಯವನ್ನು ಮುಂದುವರಿಸಲಾಯಿತು. ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಜೇನುನೊಣಗಳು ದಾಳಿ ನಡೆಯುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆಯೂ ದಾಳಿ ಮಾಡಿದ್ದವು.

ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜೇನು ನೊಣಗಳು ಕ್ರಿಕೆಟ್ ಆಡುತ್ತಿವೆ. ಇದು ಯಾವಾಗಲೂ ಸಿಗುವ ದೃಶ್ಯವಲ್ಲ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸೌಥ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಎದುರಾಗಿದ್ದವು. ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಶ್ರೀಲಂಕಾ 49.3 ಓವರ್ ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 203 ರನ್ ಗಳಿಗೆ ಅಲೌಟ್ ಆಯ್ತು. ಲಂಕಾ ನೀಡಿದ ಮೊತ್ತವನ್ನು ಬೆನ್ನಟ್ಟಿದ ಸೌಥ್ ಆಫ್ರಿಕಾ 9 ವಿಕೆಟ್ ಗಳಿಂದ ಗೆದ್ದು ಗೆಲುವಿನ ನಗೆ ಬೀರಿತು. ಈಗಾಗಲೇ ಸೆಮಿಫೈನಲ್ ಆಸೆಯನ್ನು ಕಳೆದುಕೊಂಡಿರುವ ಸೌಥ್ ಆಫ್ರಿಕಾಗೆ ಇದು ಎರಡನೇ ಗೆಲುವು ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *