ನವದೆಹಲಿ: ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತೊಂದು ಪಟ್ಟು ಹಿಡಿದಿದ್ದಾರೆ. ಈ ಮೂಲಕ ಮಾಡಲು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರೇ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ.
ಹೌದು. ಮಲ್ಲಿಕಾರ್ಜುನ ಖರ್ಗೆ ಮೂಲಕ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರಲು ಡಿ.ಕೆ ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ರಾಹುಲ್ ಗಾಂಧಿ (Rahul Gandhi) ಜೊತೆಗಿನ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಖರ್ಗೆ ನಿವಾಸಕ್ಕೆ ಡಿಕೆಶಿ ಆಗಮಿಸಿದ್ದಾರೆ. ರಾಹುಲ್ ಗಾಂಧಿಗೆ ಪರಿಸ್ಥಿತಿ ಮನವರಿಕೆ ಮಾಡುವಂತೆ ಖರ್ಗೆಗೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಇದನ್ನು ಅರ್ಥ ಮಾಡಿಸಿ ಎಂದು ಮನವಿ ಮಾಡಿಕೊಂಡಿರುವ ಅವರು, ನೀವು ಸಿಎಂ ಆಗಿ ಇಲ್ಲ ಪರಿಸ್ಥಿತಿ ಅರ್ಥ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ.
Advertisement
ಒಟ್ಟಿನಲ್ಲಿ ಈಗ ಖರ್ಗೆಯನ್ನ ಡಿಕೆಶಿ ಮನವೊಲಿಸ್ತಾರಾ? ಅಥವಾ ಡಿಕೆಶಿಯನ್ನ ಖರ್ಗೆ ಮನವೊಲಿಸ್ತಾರಾ ಎಂಬುದು ತೀವ್ರ ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಖರ್ಗೆ ಹೆಸರು ಮುಂದಿಟ್ಟು ಸಿದ್ದರಾಮಯ್ಯಗೆ ಚೆಕ್ ಮೇಟ್ ಕೊಟ್ಟ ಡಿಕೆಶಿ – ರಾಹುಲ್ ಸಂಧಾನ ವಿಫಲ
Advertisement
ಇತ್ತ ಡಿಕೆಶಿಯನ್ನ ಡಿಸಿಎಂಗೆ ಮನವೊಲಿಸುತ್ತಿರುವ ಖರ್ಗೆಗೆ, ನೀವೇ ಬಂದು ಸಿಎಂ ಆಗಿ ಎಂದು ಡಿಕೆಶಿ ಹಠಕ್ಕೆ ಬಿದ್ದಿದ್ದಾರೆ. ನಾನು ಇಲ್ಲಾ, ನೀವು ಆದರೆ ಯಾವ ಕಾರಣಕ್ಕೂ ಸಿದ್ದರಾಮಯ್ಯ ಒಪ್ಪಲು ಸಾಧ್ಯವಿಲ್ಲ ಎಮದು ಡಿಕೆಶಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಮನವೊಲಿಕೆಗೆ ಮುಂದಾದ ಮಲ್ಲಿಕಾರ್ಜುನ ಖರ್ಗೆ ಅವರೇ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.