ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲಿನ ಭರವಸೆಯಿಂದ ಹಿಂದೆ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರು ಒಂದು ಡಾಲರ್‌ಗೆ (Dollar) 15 ರೂಪಾಯಿಯಾಗುತ್ತದೆ ಎಂದಿದ್ದರು. ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಅವರಿಗೆ ಸಾಂತ್ವನ ಹೇಳುವಿರಾ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
Advertisement
ಟ್ವೀಟ್‍ನಲ್ಲಿ ಏನಿದೆ:
ರಸ್ತೆಗುಂಡಿಗಳು (Road Pothole) ಸಾವಿನ ಗುಂಡಿಗಳಾಗಿವೆ, 20ಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ರಸ್ತೆಗುಂಡಿಗಳಿಗೆ ಭಯಬಿದ್ದು ಕಾರ್ಯಕ್ರಮಗಳಿಗೆ ಹೆಲಿಕಾಪ್ಟರ್ ಸಂಚಾರ ಆಯ್ದುಕೊಂಡಿರಾ ಮೋದಿ ಅವರೇ? ಹಿಂದೆ ತಮಗಾಗಿ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋದ ಬಗ್ಗೆ ಮಾತಾಡುವಿರಾ? ಸಿಎಂಗೆ ವಿವರಣೆ ಕೇಳುವಿರಾ? ಸಹಾಯಕ ಪ್ರಾಧ್ಯಾಪಕರು, ಕೆಪಿಟಿಎಲ್ (KPTL) ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ ಮೋದಿ ಅವರೇ? ಇದನ್ನೂ ಓದಿ: ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್ ಆಕ್ರೋಶ
Advertisement
Advertisement
ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ “2 ಕೋಟಿಗೆ ಒಂದು ಉದ್ಯೋಗ” ಎಂಬಂತಾಗಿದೆ. ನಿಮ್ಮ ಟ್ರಬಲ್ ಇಂಜಿನ್ ಸರ್ಕಾರದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ? ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ. ಮೋದಿ ಅವರೇ, ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ರೂ. ಪರಿಹಾರ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ. ಕನ್ನಡಿಗರನ್ನು ಅನಾಥರನ್ನಾಗಿಸಿದೆ ನಿಮ್ಮ ಟ್ರಬಲ್ ಇಂಜಿನ್ ಸರ್ಕಾರ. ಬೆಲೆ ಏರಿಕೆಯ ಜೊತೆಗೆ ನಿಮ್ಮ ಅವೈಜ್ಞಾನಿಕ GST ಹೇರಿಕೆ ಹಾಗೂ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗೃಹಿಣಿರಿಗೆ ಕಣ್ಣೀರು, ಬಡವರ ಹೊಟ್ಟೆಗೆ ತಣ್ಣೀರು, ರೈತರಿಗೆ ರಕ್ತ ಕಣ್ಣೀರು ಎಂಬಂತಾಗಿದೆ ಟ್ರಬಲ್ ಇಂಜಿನ್ ಸರ್ಕಾರದ ಜಿಎಸ್‍ಟಿ ಹಾಗೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೇ ಮೋದಿ ಅವರೇ? ಟ್ರಬಲ್ ಇಂಜಿನ್ ಸರ್ಕಾರದ ಕಿರುಕುಳದ ಬಗ್ಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು. ಇದನ್ನೂ ಓದಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Advertisement
ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡುವಿರಾ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ? ನೇಮಕಾತಿ ಹಗರಣಗಳು. ವರ್ಗಾವಣೆ ದಂಧೆ, ಪಿಎಸ್‍ಐ ಹಗರಣ, 40% ಕಮಿಷನ್ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ರಾಜೀನಾಮೆ, ರಸ್ತೆ ಗುಂಡಿಗಳು, ಸಿಎಂ ಹುದ್ದೆಗೆ 2,500 ಕೋಟಿ ರೂ., ಮಂತ್ರಿಗಿರಿಗೆ 50 ಕೋಟಿ ರೂ. ಯತ್ನಾಳರ ಆರೋಪಗಳು ಇವೆಲ್ಲದರ ಬಗ್ಗೆ ತಮ್ಮ ಭಾಷಣದಲ್ಲಿ ಜಾಗವಿದೆಯೇ ಮೋದಿ ಅವರೇ?
'@narendramodi ಅವರೇ,
ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು.
ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ?#TroubleEngineSarkara ದ
ಭ್ರಷ್ಟಾಚಾರದ ದರ್ಶನವಾಯಿತೇ?
ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ? pic.twitter.com/pVrZjNZRa7
— Karnataka Congress (@INCKarnataka) November 11, 2022
ಮೋದಿ ಅವರೇ, ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ? ಟ್ರಬಲ್ ಇಂಜಿನ್ ಸರ್ಕಾರದ ಭ್ರಷ್ಟಾಚಾರದ ದರ್ಶನವಾಯಿತೇ? ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ? ಕರ್ನಾಟಕ ಹಿಂದೆ ನಮ್ಮ ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ನಂ.1 ಆಗಿತ್ತು, ಈಗ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಮೋದಿ ಅವರೇ, ಟ್ರಬಲ್ ಇಂಜಿನ್ ಸರ್ಕಾರದ ಟ್ರಬಲ್‍ನಿಂದ ಬೇಸತ್ತು ಹಲವರು ನಿಮಗೆ ಪತ್ರ ಬರೆದಿದ್ದಾರೆ. ಆ ಪತ್ರಗಳಿಗೆ ಉತ್ತರ ಹೊತ್ತು ತಂದಿದ್ದೀರಾ? ಅವರ ನೋವು ಆಲಿಸುವಿರಾ? ವೈಫಲ್ಯ ಮರೆಮಾಚಲು ಹಿಜಬ್ (Hijab), ಹಲಾಲ್ (Halal), ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ ಟ್ರಬಲ್ ಇಂಜಿನ್ ಸರ್ಕಾರ. ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ ಮೋದಿ ಅವರೇ, ಸಿಎಂ ಬೊಮ್ಮಾಯಿ (Basavaraj Bommai) ಅವರು ಆಕ್ಷನ್‍ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ. ಅವರಿಗೆ ಬುದ್ಧಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.