ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

Public TV
2 Min Read
Harshika Poonacha 3

ಬೆಂಗಳೂರು: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ಕನ್ನಡದ ನಟಿ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ ಹೇಳಿದ್ದು ಹೀಗೆ:
ಅವಕಾಶ ಇದೆ ಎನ್ನುವ ಕಾರಣಕ್ಕೆ ನಾನು ಬಾಲಿವುಡ್‍ಗೆ ಹೋಗಿದ್ದೆ. ಆದರೆ ಸಿನಿಮಾ ಶುರುವಾಗಿರಲಿಲ್ಲ. ಸಿನಿಮಾ ಶೂಟಿಂಗ್‍ಗಾಗಿ ಫೋಟೋಶೂಟ್‍ ಕೂಡ ಮಾಡಿಸಿ ಎಲ್ಲ ತಯಾರಿ ನಡೆಸಿಕೊಳ್ಳಲಾಗಿತ್ತು. ಸಿನಿಮಾ ಶೂಟಿಂಗ್‍ಗೆ ಒಂದು ವಾರ ಇದ್ದಾಗ ಮ್ಯಾನೇಜರ್ ಕರೆ ಮಾಡಿ, ನಮ್ಮ ಪ್ರೊಡಕ್ಷನ್ ನಿಮ್ಮ ಜೊತೆ ಕಮಿಟ್‍ಮೆಂಟ್ ಮಾಡಲು ಇಚ್ಛಿಸುತ್ತಿದೆ ಎಂದು ಹೇಳಿದ್ದರು.

HARSHIKA POONACHA

ಈ ಕರೆಗೆ ಸಿಟ್ಟಾಗಿ ನಾನು, ಸರಿ ಎಂದು ಹೇಳಿ ಮೊದಲ ಫ್ಲೈಟ್‍ನಲ್ಲೇ ಮುಂಬೈನಿಂದ ಬೆಂಗಳೂರಿಗೆ ಬಂದೆ. ನಾನು ಅವರಿಗೆ ಒಂದು ಮಾತನ್ನು ಹೇಳಲಿಲ್ಲ. ಅವರಿಗೆ ನಾನು ಎಲ್ಲಿ ಹೋದೆ ಎಂಬುದು ತಿಳಿಯಲಿಲ್ಲ. ನನ್ನ ಫೋನ್ ಕೂಡ ಸ್ವಿಚ್ ಆಫ್ ಮಾಡಿ ನಾನು ಅಲ್ಲಿಂದ ಹೊರಡಿದ್ದೆ ಮತ್ತೆ ಅವರನ್ನು ನಾನು ಸಂಪರ್ಕಿಸಲು ಇಷ್ಟಪಡಲಿಲ್ಲ. ಏಕೆಂದರೆ ಇದು ನನ್ನ ನಿರ್ಧಾರ. ನನಗೆ ಒಂದು ಇಷ್ಟವಿಲ್ಲ ಎಂದರೆ ಅದು ನನಗೆ ಇಷ್ಟವಿಲ್ಲ ಎಂದೇ ಅರ್ಥ.

ಈ ವಿಷಯದಲ್ಲಿ ನಾನು ಯಾರನ್ನೂ ಆರೋಪಿಸುವುದಿಲ್ಲ. ಏಕೆಂದರೆ ನಮ್ಮ ಸ್ಯಾಂಡಲ್‍ವುಡ್ ನಲ್ಲಿ ಈ ರೀತಿ ಎಂದಿಗೂ ನಡೆಯಲಿಲ್ಲ. ಹಾಗಾಗಿ ನಾನು ಆರಾಮಾಗಿ ಆಟವಾಡಿಕೊಂಡು ಸಿನಿಮಾ ಮಾಡುತ್ತಿದ್ದೆ. ಒಂದೇ ಬಾರಿಗೆ ಒಂದು ದೊಡ್ಡ ಹೆಜ್ಜೆ ಇಟ್ಟು ದೊಡ್ಡ ಮೀನು ಹಿಡಿಯುವುದಕ್ಕೆ ಬಾಲಿವುಡ್‍ಗೆ ಕಾಲಿಟ್ಟೆ. ಆದರೆ ಈ ವಿಚಾರ ಗೊತ್ತಾಗಿ ನನಗೆ ಬೇಸರವಾಯಿತು. ಇದನ್ನೂ ಓದಿ: ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

HARSHIKA POONACHA 2

ನಾನು 15 ವರ್ಷವಿರುವಾಗ ಚಿತ್ರರಂಗಕ್ಕೆ ಕಾಲಿಟ್ಟಿದೆ. ಆಗ ಸ್ಯಾಂಡಲ್‍ವುಡ್‍ನಲ್ಲಿ ನನಗೆ ತುಂಬಾ ಚೆನ್ನಾಗಿ ನೋಡಿಕೊಂಡರು. ಹಾಗಾಗಿ ಆಟವಾಡಿಕೊಂಡು ಸಿನಿಮಾಗಳನ್ನು ಮಾಡುತ್ತಿದೆ. ಹಾಗಾಗಿ ನನಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಿಳಿದಿರಲಿಲ್ಲ. ಮೊದಲ ಬಾರಿಗೆ ಬಾಲಿವುಡ್‍ಗೆ ಹೋದಾಗ ನನಗೆ ಈ ರೀತಿಯ ಅನುಭವ ಆಯ್ತು. ಅವರು ಆ ರೀತಿ ಹೇಳಿದ್ದಾಗ ನಾನು ಅವರ ಚಿತ್ರಕ್ಕೆ ಸೂಕ್ತ ವ್ಯಕ್ತಿ ಅಲ್ಲ ಎಂದು ಅಲ್ಲಿಂದ ನನ್ನ ತಂದೆ ಜೊತೆ ಹೊರಟು ಬೆಂಗಳೂರಿಗೆ ಬಂದೆ. ಇದನ್ನೂ ಓದಿ: ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

ಬೆಂಗಳೂರಿಗೆ ಬಂದಾಗ ಪ್ರತಿಯೊಬ್ಬರು ನಾನು ಬಾಲಿವುಡ್‍ಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿದೆ ಎಂದು ಹೇಳುತ್ತಿದ್ದರು. ಆದರೆ ನನಗೆ ಆ ಸಮಯ ಏನು ಹೇಳಬೇಕೆಂಬುದು ತಿಳಿದಿರಲಿಲ್ಲ. ಬಾಲಿವುಡ್ ಸಿನಿಮಾ ಅವಕಾಶ ಸಿಕ್ಕ ಖುಷಿಗೆ ನಾನು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದೆ. ಆ ಸಮಯದಲೇ ನನಗೆ ಆ ವಿಷಯದ ಬಗ್ಗೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ಅದರ ಬಗ್ಗೆ ಯೋಚಿಸುತ್ತಿರಲಿಲ್ಲ. ಆಗ ನಾನು ಅಲ್ಲಿ ನನಗೆ ತೊಂದರೆ ಆಗಿದೆ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ ಎಂದರು.

https://www.youtube.com/watch?v=5JRSNBMt95Q

Share This Article
Leave a Comment

Leave a Reply

Your email address will not be published. Required fields are marked *