ನವದಹೆಲಿ: ʼಶಾಂತಿಗಾಗಿ ಬದಲಾದ ನಿಜವಾದ ಶಕ್ತಿʼ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ (Rahul Gandhi) ವಿರುದ್ಧ ಬಿಜೆಪಿ ತಿರುಗೇಟು ನೀಡಿದೆ. ಒಸಾಮಾ ಬಿನ್ ಲಾಡೆನ್‌ನನ್ನು (Osama Bin Laden) ಶ್ಲಾಘಿಸಿದ್ದ ವ್ಯಕ್ತಿಯಲ್ಲಿ ಶಾಂತಿ ಹುಡುಕುತ್ತಿದ್ದಾರೆ ಎಂದು ಕಾಂಗ್ರೆಸ್‌ಗೆ (Congress) ಬಿಜೆಪಿ (BJP) ಟಾಂಗ್ ಕೊಟ್ಟಿದೆ.
ಬಾಲಾಕೋಟ್ (Balakot) ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್, ತನ್ನದೇ ಆದ ಸೇನಾ ಮುಖ್ಯಸ್ಥನ ವಿರುದ್ಧ ಮಾತನಾಡಿತ್ತು. ಈಗ ಮುಷರಫ್ ಅವರನ್ನು ಶ್ಲಾಘಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ (Shehzad Poonawalla) ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ
Advertisement
Parvez Musharraf who had hailed Osama Bin Laden & Taliban had sung praises of Rahul Gandhi too – called him a gentleman and pledged his support to him!!
Perhaps this is the reason why Shashi Tharoor is eulogising the architect of Kargil & a backer of terrorism!! Sigh https://t.co/nhE1emXqV8 pic.twitter.com/tYRt7UxEFH
— Shehzad Jai Hind (@Shehzad_Ind) February 5, 2023
Advertisement
ಒಮ್ಮೆ ಮುಷರಫ್ ಅವರು ರಾಹುಲ್ ಗಾಂಧಿಯನ್ನು ಸಂಭಾವಿತ ವ್ಯಕ್ತಿ ಎಂದು ಹೊಗಳಿದ್ದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು ಎಂದು ಪೂನಾವಾಲಾ ಟ್ವೀಟ್ ಮಾಡಿ ಟೀಕಾಪ್ರಹಾರ ನಡೆಸಿದ್ದಾರೆ.
Advertisement
ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಹೊಗಳಿದ್ದ ಪರ್ವೇಜ್ ಮುಷರಫ್ ಅವರು ರಾಹುಲ್ ಗಾಂಧಿಯವರನ್ನೂ ಹಾಡಿ ಹೊಗಳಿದ್ದರು. ರಾಹುಲ್ ಗಾಂಧಿಯನ್ನು ಸಂಭಾವಿತ ಎಂದು ಕರೆದಿದ್ದರು. ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಬಹುಶಃ ಇದೇ ಕಾರಣಕ್ಕಾಗಿಯೇ ಶಶಿ ತರೂರ್, ಕಾರ್ಗಿಲ್‌ನ ವಾಸ್ತುಶಿಲ್ಪಿ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಿದ್ದ ವ್ಯಕ್ತಿಯನ್ನು ಬೆಂಬಲಿಗನನ್ನು ಶ್ಲಾಘಿಸಿದ್ದಾರೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ
Advertisement
“Pervez Musharraf, Former Pakistani President, Dies of Rare Disease”: once an implacable foe of India, he became a real force for peace 2002-2007. I met him annually in those days at the @un &found him smart, engaging & clear in his strategic thinking. RIP https://t.co/1Pvqp8cvjE
— Shashi Tharoor (@ShashiTharoor) February 5, 2023
79 ವರ್ಷ ವಯಸ್ಸಿನ ಪರ್ವೇಜ್ ಮುಷರಫ್ ಅವರು ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.
“ಮುಷರಫ್ ಒಮ್ಮೆ ಭಾರತದ ನಿಷ್ಕಪಟ ವೈರಿಯಾಗಿದ್ದರು. ಆದರೆ ಅವರು 2002 ಮತ್ತು 2007 ರ ನಡುವೆ ಶಾಂತಿಗಾಗಿ ನಿಜವಾದ ಶಕ್ತಿಯಾದರು. ನಾನು ಒಮ್ಮೆ ಯುಎನ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಚುರುಕತನ, ಬದ್ಧತೆ, ಕಾರ್ಯತಂತ್ರದ ಚಿಂತನೆಯಲ್ಲಿ ಸ್ಪಷ್ಟತೆಯ ಗುಣಗಳನ್ನು ಅವರು ಹೊಂದಿದ್ದರು. RIP” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k