ಬೆಂಗಳೂರು: ಮುಖದ ಸೌಂದರ್ಯ ವರ್ಧನೆಗೆ ಅಂತಾ ಮಹಿಳೆಯರು (Womens) ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗೋದು ಸಾಮಾನ್ಯ. ಆದರೆ ಈಗ ಬ್ಯೂಟಿಪಾರ್ಲರ್‌ಗೆ ಹೋದ ಮಹಿಳೆಯರು, ಚರ್ಮದ (Skin) ವೈದ್ಯರನ್ನು ಕಾಣುವಂತಾಗಿದೆ. ಇದಕ್ಕೆ ಸ್ಫೋಟಕ ಕಾರಣವನ್ನು ವೈದ್ಯರ ಜೊತೆಗೆ ಬ್ಯೂಟಿಪಾರ್ಲರ್ ಅಸೋಸಿಯೇಷನ್ ಕೂಡ ಬಾಯಿಬಿಟ್ಟಿದೆ.
Advertisement
Advertisement
ಫೇಸ್ ಬ್ಲೀಚ್, ಕ್ಲೀನ್ ಅಪ್, ಹೈಬ್ರೂ, ಪೆಡಿಕ್ಯೂರ್ ಅಂತಾ ಸೌಂದರ್ಯವರ್ಧನೆಗಾಗಿ ಬ್ಯೂಟಿಪಾರ್ಲರ್‌ಗೆ ಹೋಗೋದು ಕಾಮನ್. ಆದ್ರೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಪಾರ್ಲರ್‌ಗಳಿಗೆ ಹೋಗಿ ಬಂದ ತಕ್ಷಣ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮುಖದಲ್ಲಿ ಬಿಳಿಗುಳ್ಳೆ, ಮುಖದಲ್ಲಿ ನವೆ ಸಮಸ್ಯೆ ಸೇರಿದಂತೆ ಕಲೆಗಳ ಸಮಸ್ಯೆ ಹೆಚ್ಚಾಗ್ತಿದೆಯಂತೆ. ಕೆಲವೊಂದು ಪಾರ್ಲರ್‌ನಲ್ಲಿ ಈ ಪ್ರಕ್ರಿಯೆಗಳಿಗೆ ಬಳಸುವ ಸಲಕರಣೆಗಳನ್ನು ಶುದ್ಧೀಕರಣ ಮಾಡದೇ ಇರೋದು, ಸ್ವಚ್ಛತೆ ಕಾಪಾಡದೇ ಇರೋದ್ರಿಂದ ಈ ಸಮಸ್ಯೆ ಎದುರಾಗುತ್ತಿದೆ ಅಂತಾರೆ ವೈದ್ಯರು. ಹೀಗಾಗಿ ಎಚ್ಚರಿಕೆಯಿಂದ ಪಾರ್ಲರ್‌ಗಳನ್ನು ಆರಿಸಿ ಹೋಗಿ ಅಂತಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಪರಮಾಣು ಬಾಂಬ್ ಯುದ್ಧದ ಬೆದರಿಕೆ ಹಾಕಿದ ಪಾಕ್ ಸಚಿವೆ
Advertisement
Advertisement
ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ನಕಲಿ ಪಾರ್ಲರ್ ಹಾವಳಿ ಅಂತಾ ಖುದ್ದು ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಸ್ಫೋಟಕ ವಿಚಾರ ಬಾಯಿ ಬಿಟ್ಟಿದೆ. ಬೆಂಗಳೂರಿನಲ್ಲಿ ಅನಾನುಭವಿ ಬ್ಯೂಟಿಷನ್‍ಗಳು ದುಡ್ಡಿನಾಸೆಗೆ ಪಾರ್ಲರ್ ತೆರೆಯುತ್ತಿರೋದ್ರಿಂದ ಈ ಸಮಸ್ಯೆ ಉದ್ಭವವಾಗಿದೆ ಅಂತಾ ಅಸೋಸಿಯೇಷನ್ ಹೇಳಿದ್ದು, ಆಯಾಯ ಜನರ ಚರ್ಮಕ್ಕನುಗುಣವಾಗಿ ಸೇವೆ ನೀಡಬೇಕು. ಆದರೆ, ಇದನ್ನು ತಿಳಿದುಕೊಳ್ಳದೇ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಂಸಾರದ ಜಂಜಾಟವೇ ಬೇಡವೆಂದು ದೇವರನ್ನೇ ವರಿಸಿದ ಚೆಲುವೆ
ಒಟ್ಟಾರೆ ಸೌಂದರ್ಯವೃದ್ಧಿಗಾಗಿ ಪಾರ್ಲ್‍ರ್‍ಗಳಿಗೆ ಹೋಗುವ ಮುನ್ನ ಅಸಲಿಯೋ ನಕಲಿಯೋ ಎಂಬುದನ್ನು ಕನ್ಫರ್ಮ್‍ಮಾಡಿಕೊಂಡು ಹೋಗಿ. ಇಲ್ಲವಾದಲ್ಲಿ ನೀವೇ ದುಡ್ಡು ಕೊಟ್ಟು ನಿಮ್ಮ ಸೌಂದರ್ಯವನ್ನು ನೀವೇ ಹಾಳು ಮಾಡಿಕೊಳ್ಳುವುದು ಸುಳ್ಳಲ್ಲ.