-ಯುವಕರಿಗೆ ಮಾದರಿಯಾಗಲಿದೆ ಶೋ ಪ್ಲಾಂಟ್ ಉದ್ಯಮ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿ ಜಯರಾಮಪ್ಪರವರು ಬರದ ನಾಡು ಕೋಲಾರ ಜಿಲ್ಲೆಯಲ್ಲಿ ತಮ್ಮ ಕನಸಿನ ಸುಂದರ ಶೋ ಪ್ಲಾಂಟ್ ನಿರ್ಮಾಣ ಮಾಡಿದ್ದಾರೆ.
Advertisement
ಬೃಹತ್ ನಗರಗಳಲ್ಲಿ ಸಿರಿವಂತರ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಂದದ ಗಿಡಗಳು, ಪಾರ್ಕ್‍ಗೆ ಹೋದಾಗ ಮನಸ್ಸಿಗೆ ನೆಮ್ಮದಿ ನೀಡುವ ಅಪರೂಪದ ಸಸ್ಯರಾಶಿಗಳನ್ನು ಜಯರಾಮಪ್ಪ ಅವರು ಮೂರು ದಶಕಗಳಿಂದಲೂ ಬೆಳೆಸುತ್ತಾ ಬಂದಿದ್ದಾರೆ. ಜಯರಾಮಪ್ಪರವರು ಕಳೆದ 28 ವರ್ಷಗಳ ಹಿಂದೆ ತಮ್ಮ 13 ಎಕರೆ ಭೂಮಿಯಲ್ಲಿ ನಗರಗಳಲ್ಲಿ ಬಹು ಬೇಡಿಕೆಯ ಅಲಂಕಾರಿಕ ಗಿಡಗಳನ್ನು ಬೆಳೆಸಲು ಆರಂಭಿಸಿದ್ದರು.
Advertisement
Advertisement
ಅಲಂಕಾರಿಕ ಗಿಡಗಳಾದ ಕ್ರೋಟಾನ್, ಡೈಪನ್‍ಬೈಕ್ಯಾ, ಅಲ್ಯೂಮಿನಿಯಂ ಪ್ಲಾಂಟ್, ಎಲಿಫೆಂಟ್ ಹಿಯರ್, ಹೀಗೆ ಐವತ್ತಕ್ಕೂ ಹೆಚ್ಚು ಬಗೆಯ ಅಲಂಕಾರಿಕಾ ಗಿಡಗಳನ್ನ ತಮ್ಮ ನರ್ಸರಿ ಯಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿಯ ಅಲಂಕಾರಿಕ ಗಿಡಗಳನ್ನು ಬೆಂಗಳೂರು, ಚೆನೈ, ಹೈದರಾಬಾದ್, ನಾಸಿಕ್, ಬಾಂಬೆ, ದೆಹಲಿ ಸೇರಿದಂತೆ ಹಲವೆಡೆ ಈ ಶೋ ಪ್ಲಾಂಟ್‍ಗಳನ್ನು ಕಳಿಸಿಕೊಡಲಾಗುತ್ತದೆ.
Advertisement
ಇಂತಹ ಅಲಂಕಾರಿಕ ಗಿಡಗಳಿಗೆ ಕೇವಲ ಮನೆಗಳಲ್ಲಷ್ಟೇ ಅಲ್ಲಾ, ಪಾರ್ಕ್‍ಗಳಲ್ಲಷ್ಟೇ ಅಲ್ಲಾ, ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡಾ ಬೇಡಿಕೆ ಇದೆ. ಕೇವಲ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಪರಿಸರ ನಾಶವಾಗಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಿರ್ಮಾಣವಾಗಿರುವ ಈ ಕಾಲದಲ್ಲಿ ಇವುಗು ನೆಮ್ಮದಿಯ ಉಸಿರು ನೀಡಬಲ್ಲವು. ಈ ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಮ ನಿಜಕ್ಕೂ ಅದಾಯ ತರುವಂತದ್ದಾಗಿದೆ.