ವಿಜಯ್ ದಳಪತಿ (Vijay Thalapathy) ತಮ್ಮ ರಾಜಕೀಯ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆ ರೋಡ್ ಶೋ ನಡೆಸಿದ್ದಾರೆ. ಆಗ ಹುಚ್ಚು ಅಭಿಮಾನಿಯೊಬ್ಬ ವಿಜಯ್‌ನ ನೋಡಲೇಬೇಕು ಅಂತ ಮರದಿಂದ ಜಿಗಿದಿದ್ದಾನೆ. ಈ ವಿಡಿಯೋ ಸಾಮಾಜಿಕ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ
ನಿನ್ನೆ (ಏ.26) ಕೊಯಮತ್ತೂರಿನಲ್ಲಿ ವಿಜಯ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ವ್ಯಾನ್ ಮೇಲೆ ನಿಂತು ಜನರ ಕಡೆ ಕೈ ಬೀಸುತ್ತಿದ್ದರು. ಈ ವೇಳೆ, ಓರ್ವ ಅಭಿಮಾನಿ ಮರದಿಂದ ಜಿಗಿದು ವ್ಯಾನ್ ಏರಿದ್ದಾನೆ. ಆತನ ವರ್ತನೆ ಕಂಡು ವಿಜಯ್ ಒಮ್ಮೆ ಶಾಕ್ ಆಗಿದ್ದಾರೆ. ಬಳಿಕ ವಿಜಯ್ ತಂಡದವರು, ಆ ಅಭಿಮಾನಿಗೆ ಪಕ್ಷದ ಸ್ಕಾರ್ಫ್ ನೀಡಿ ಸಮಾಧಾನ ಮಾಡಿ ಕಳುಹಿಸಲಾಯಿತು. ಇದನ್ನೂ ಓದಿ:ದೇಶದ ಪರಿಸ್ಥಿತಿ ನೋಡಿದ್ರೆ ಯುದ್ಧ ಮಾಡೋದು ಶ್ರೇಷ್ಠ ಅಲ್ಲ: ವಿನೋದ್ ರಾಜ್
ಸದ್ಯ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಮುಗಿಸಿ ನಂತರ ಕಂಪ್ಲೀಟ್ ಆಗಿ ರಾಜಕೀಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಮುಂದಿನ ವರ್ಷ ಜ.9ರಂದು ರಿಲೀಸ್ ಆಗಲಿದೆ.