ಶಾಂತಿ, ಸೌಹಾರ್ದತೆಗೆ ಬ್ಯಾರಿ ಸಮುದಾಯದ ಕೊಡುಗೆ ಅಪಾರ: ಡಿಸಿಎಂ ‌ಡಿ.ಕೆ.ಶಿವಕುಮಾರ್

Public TV
3 Min Read
d.k.shivakumar bearys

ಬೆಂಗಳೂರು: ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಬಣ್ಣಿಸಿದರು.

ಬೆಂಗಳೂರಿನಲ್ಲಿ (Bengaluru) ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ (Bearys Welfare Association) ನೂತನ ಸೌಹಾರ್ದ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಂವಿಧಾನ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್: ಸಿದ್ದರಾಮಯ್ಯ

bearys 1

ಎಲ್ಲಾ ಧರ್ಮದವರ ಜೊತೆ ಸ್ನೇಹ ಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಬ್ಯಾರಿ ಭಾಷಿಕರು ನೀಡಿರುವ ಕೊಡುಗೆ ಸ್ಮರಣೀಯವಾದುದು. ಹೆಣ್ಣುಮಕ್ಕಳು ಒಡವೆ ಹಾಕಿಕೊಂಡರೆ ಹೇಗೆ ಸುಂದರವಾಗಿ ಕಾಣುತ್ತಾರೋ, ಹಾಗೆಯೇ ಬ್ಯಾರಿ ಭಾಷಿಕರು ಕನ್ನಡವನ್ನು ಸುಂದರಗೊಳಿಸಿದ್ದಾರೆ ಎಂದರು.

ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ. ಪೂಜೆ ಯಾವುದಾದರೂ ಭಕ್ತಿಯೊಂದೇ. ಕರ್ಮ ಯಾವುದಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ದೇವಾಲಯಗಳಿಗೆ ದಾನ-ಧರ್ಮ ಮಾಡಿದವರು ಬ್ಯಾರಿ ಭಾಷಿಕರು. ಮುಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ ಕಟ್ಟಿಸಿದ್ದು ಬಪ್ಪ ಬ್ಯಾರಿ ಎಂದು ಇದೇ ವೇಳೆ ಸ್ಮರಿಸಿಕೊಂಡರು. ಇದನ್ನೂ ಓದಿ: ಶೆಟ್ಟರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ; ವೀರಶೈವ ಮಹಾಸಭಾದಿಂದ ಸಿಎಂಗೆ ಪತ್ರ

ಬ್ಯಾರಿ ಸಮುದಾಯ ಭವನಕ್ಕೆ ಸಹಾಯ ಮಾಡಲು ಅಥವಾ ನಿಮಗೆ ಆಶ್ವಾಸನೆಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ. ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕಾರಣ ನಿಮ್ಮ ಋಣ ತೀರಿಸಲು ಬಂದಿದ್ದೇನೆ. ದೇಶದಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿ, ಸಮರ್ಥವಾದ ಉತ್ತರ ನೀಡಲು ಕಾರಣರಾಗಿದ್ದೀರಿ ಎಂದು ತಿಳಿಸಿದರು.

bearys

ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಧರ್ಮದವರನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತದೆ ಎಂದು ಭರವಸೆ ನೀಡಿದರು.

ಹುಟ್ಟಿದ ಊರಿನಲ್ಲೇ ಉದ್ಯೋಗ ಸೃಷ್ಟಿ ಮಾಡಿ
ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ. ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ. ಮಂಗಳೂರು ಹೂಡಿಕೆದಾರರ ಸ್ವರ್ಗ. ಎಲ್ಲಾ ರೀತಿಯಲ್ಲೂ ಅಲ್ಲಿ ಅವಕಾಶವಿದ್ದು, ಸರ್ಕಾರ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿ. ಕೋಮು ಗಲಭೆಯ ಪ್ರಯೋಗಶಾಲೆ ಎನ್ನುವ ಹೆಸರು ಅಳಿಸಿ ಹಾಕಿ. ಮಲೇಷ್ಯಾ ಮಾದರಿಯಲ್ಲಿ ಟ್ವಿನ್ ಸಿಟಿಯನ್ನು ಮೊದಲು ಕಟ್ಟಿದವರೇ ಬ್ಯಾರಿ ಸಮುದಾಯದವರು. ನಿಮ್ಮ ಕೈಲಿ ಎಲ್ಲವೂ ಸಾಧ್ಯ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ ಹಸುವಿನ ಸಗಣಿಯನ್ನೂ ಬಿಟ್ಟಿಲ್ಲ: ಮೋದಿ ವಾಗ್ದಾಳಿ

bearys 2

ಸಮುದಾಯದ ಬೆಳವಣಿಗೆಗೆ ನಿವೇಶನಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದೀರಿ. ಕಾನೂನಿ ಚೌಕಟ್ಟಿನಲ್ಲಿ ಏನೇ ಸಾಧ್ಯತೆ ಇದ್ದರೂ ಸಹಾಯ ಮಾಡಲಾಗುವುದು. ಮುಖ್ಯಮಂತ್ರಿಗಳು ಕೈಗೆ ಪೆನ್ ಕೊಟ್ಟಿದ್ದಾರೆ. ಇದರಿಂದ ಏನು ಬೇಕಾದರೂ ಮಾಡಬಹುದು. “You Can Make More Friends, You can Make More Enemies”. ನಾವು ಸ್ನೇಹ ಸಂಪಾದನೆ ಮಾಡೋಣ. ನನ್ನ ಮನೆ ಹಾಗೂ ಮುಖ್ಯಮಂತ್ರಿಗಳ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.

ಯು.ಟಿ.ಖಾದರ್ ಅವರು ಎಲ್ಲಾ ಮಂತ್ರಿಗಳಿಗಿಂತ ಮೇಲೆ ಕುಳಿತಿದ್ದಾರೆ
ಸ್ಪೀಕರ್ ಆಗಿರುವಂತಹ ಯು.ಟಿ.ಖಾದರ್ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೀರಿ. ಅವರು ನಮಗಿಂತ ಎತ್ತರದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ದರು. ಯಾರ ಹಣೆಯಲ್ಲಿ ಏನು ಬರೆದಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ನೀವು ನಮ್ಮನ್ನೆಲ್ಲಾ ಮೀರಿಸಿ ಮುಂದೊಂದು ದಿನ ಬೆಳೆಯಬಹುದು ಎಂದರು.

ರಾಜ್ಯಸಭೆಗೆ ಕಳಿಸುತ್ತೇವೆ ಎಂದರೂ ಫಾರೂಕ್ ಬರಲಿಲ್ಲ
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿ, ರಾಜ್ಯಸಭೆ ಸದಸ್ಯನನ್ನಾಗಿ ಮಾಡುತ್ತೇವೆ ಎಂದು ಹೇಳಿದೆವು. ಆದರೆ ಕುಮಾರಸ್ವಾಮಿ ಅವರೇ ಮುಖ್ಯ ಎಂದು ಅವರ ಜೊತೆ ಹೋದರು. ಮುಂದಕ್ಕೆ ಈ ತಪ್ಪು ಮಾಡಲು ಹೋಗಬೇಡಿ. ಇಡೀ ಸಮುದಾಯ ಬಳಲುತ್ತಾ ಇದೆ ಎಂದು ಸಲಹೆ ನೀಡಿದರು.

Web Stories

Share This Article