ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಮೃತಪಟ್ಟಿರುವಂತಹ ಪ್ರಸಂಗ ಹನೂರು ಸಮೀಪದ ಅಜ್ಜಿಪುರ ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಕಳೆದ ಎರಡು ದಿನಗಳ ಹಿಂದೆ ತಾಯಿ ಕರಡಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಮರಿ ಕರಡಿಯು ಮಲೆಮಹದೇಶ್ವರ ವನ್ಯಧಾಮದ ಅಜ್ಜಿಪುರ ರಸ್ತೆಯಲ್ಲಿ ಅಸ್ವಸ್ಥಗೊಂಡು ಎರಡು ಕಲ್ಲುಗಳ ನಡುವೆ ಸೇರಿಕೊಂಡಿತ್ತು. ನಂತರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅಧಿಕಾರಿಗಳು ಸಹ ಆಗಮಿಸಿ ತಾಯಿಯ ಜೊತೆ ಸೇರಿಸಲು ಪ್ರಯತ್ನಿಸಿದ್ದರು. ಆದರೆ, ತಾಯಿ ಕರಡಿ ಸಿಗುವಷ್ಟರಲ್ಲಿ ಮರಿ ಕರಡಿ ಮೃತಪಟ್ಟಿದೆ.
ಬಳಿಕ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ನೇತೃತ್ವದಲ್ಲಿ ನಡೆಸಲಾಯಿತು. ಎಸಿಎಫ್ ಶಿವರಾಮ್, ವಲಯ ಅರಣ್ಯ ಅಧಿಕಾರಿ ಪ್ರವೀಣ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.