ಚೆನ್ನೈ: ಕರಡಿ ದಾಳಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ (Tamil Nadu) ತೆಂಕಶಿ ಜಿಲ್ಲೆಯಲ್ಲಿ (Tenkasi district) ನಡೆದಿದೆ.
Advertisement
ಮಸಾಲಾ ಪೊಟ್ಟಣಗಳನ್ನು ಹೊತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಶಿವಶೈಲಂನಿಂದ ಪೇಠನ್‍ಪಿಳ್ಳೈಗೆ ಅರಣ್ಯ ಪ್ರದೇಶದ ಮಧ್ಯೆ ತೆರಳುತ್ತಿದ್ದ ವೇಳೆ ಕರುತಿಲಿಂಗಪುರದ ವೈಗುಂಡಮಣಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದ್ದಕ್ಕಿದ್ದಂತೆ ಪೊದೆಯಿಂದ ಜಿಗಿದ ಕರಡಿ, ಏಕಾಏಕಿ ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಅಲ್ಲದೇ ವ್ಯಕ್ತಿಯನ್ನು ಕೆಳಗೆ ಮಲಗಿಸಿಕೊಂಡು ಕಚ್ಚಲು ಪ್ರಾರಂಭಿಸಿದೆ. ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
Advertisement
தென்காசியில் பைக்கை வழிமறித்து 3 பேரை கடித்துக் குதறிய கரடி!!#tenkasi #bear #ATTACK pic.twitter.com/JD0kWjzMSs
— A1 (@Rukmang30340218) November 6, 2022
Advertisement
ಈ ವೇಳೆ ಅರಣ್ಯ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದ ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಿಸಲು ಕರಡಿ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿದ್ದರೂ ಕರಡಿ ಒಂದು ಚೂರು ಕೂಡ ಕದಲಲಿಲ್ಲ. ನಂತರ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಗಾಬರಿಗೊಂಡ ಕರಡಿ ಜನರ ಗುಂಪಿನ ಮಧ್ಯೆ ಓಡುತ್ತಾ ನಾಗೇಂದ್ರನ್ ಮತ್ತು ಸೈಲೇಂದ್ರ ಎಂಬ ಇಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Advertisement
ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯಿಂದ ಮೂವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಕರಡಿಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಸದ್ಯಕಿಲ್ಲ ಮುಕ್ತಿ – ರಾಹುಲ್, ಸೋನಿಯಾಗೆ ಮತ್ತೆ ED ಸಮನ್ಸ್?