ಬಳ್ಳಾರಿ: ನಿನ್ನೆ ತಾನೆ ತುಮಕೂರು ನಗರದ ಮನೆಯೊಂದರಲ್ಲಿ ಚಿರತೆ ನುಗ್ಗಿದ ಸುದ್ದಿಯನ್ನು ಕೇಳಿದ್ದೇವೆ. ಇದೀಗ ಕರಡಿಯೊಂದು ಜಿಲ್ಲೆಯ ಹೊಸಪೇಟೆ ತಾಲೂಕಿನ ಮೆಟ್ರಿ ಗ್ರಾಮಕ್ಕೆ ಪ್ರತಿನಿತ್ಯ ಬಂದು ಹೋಗುತ್ತಿದೆ.
ಪ್ರತಿನಿತ್ಯ ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಬರುವ ಕರಡಿ ಅರಾಮಾಗಿ ಓಡಾಡುತ್ತಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದೆ. ಪ್ರತಿರಾತ್ರಿ ಸ್ಥಳೀಯ ಸುಂಕಲಮ್ಮ ದೇವಸ್ಥಾನದಲ್ಲಿ ದೀಪ ಹಚ್ಚಿರುವ ಎಣ್ಣೆಯನ್ನು ಸವಿದು ವಾಪಾಸ್ ಹೋಗುತ್ತದೆ. ಒಂದು ವೇಳೆ ದೇವಸ್ಥಾನದ ಗೇಟ್ ಹಾಕಿದ್ದರೆ ಅದನ್ನು ಮುರಿದು, ಸರಿಸಿ ಒಳಹೋಗಿ ಎಣ್ಣೆ ತಿಂದು ಹೋಗುತ್ತದೆ.
ಕಳೆದ ಮೂರು ತಿಂಗಳಿನಿಂದ ಕರಡಿ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಗ್ರಾಮದಲ್ಲಿ ಮನೆ ಮುಂದೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ವೇಳೆಯಲ್ಲಿ ಗ್ರಾಮದಲ್ಲಿ ಓಡಾಡುವ ಕರಡಿಯನ್ನು ಆದಷ್ಟು ಬೇಗ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
https://youtu.be/S3BuYgLN6rc