ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಅಚ್ಚು ಮೆಚ್ಚಿನ ಟ್ರಾನ್ಸ್‌ಪೋರ್ಟ್ ಅಂದರೆ ನಮ್ಮ ಮೆಟ್ರೋ. ಆದ್ರೆ ನಮ್ಮ ಮೆಟ್ರೋ ರೈಲು ಪ್ರಯಾಣದಲ್ಲಿ ಒಂದಿಲ್ಲೊಂದು ಸಮಸ್ಯೆ ಆಗ್ತಾನೇ ಇರುತ್ತೆ. ಈ ಹಿಂದೆ ಪಿಲ್ಲರ್ ಬಿರುಕು ಬಿಟ್ಟಿತ್ತು. ಆದ್ರೆ ಈಗ ಮೆಟ್ರೋ ಗ್ರಾನೈಟ್‍ನ ಹೊಸ ಕಥೆ ಶುರುವಾಗಿದೆ.
Advertisement
ಹೌದು. ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗಿದೆ. ಆದ್ರೆ ಮೆಟ್ರೋ ನಿಲ್ದಾಣಗಳಲ್ಲಿ ನೆಲಕ್ಕೆ ಹಾಕಿರುವ ಗ್ರಾನೈಟ್ ಮೇಲೆ ಕಾಲಿಟ್ಟರೆ ಜಾರುತ್ತೆ. ಅಷ್ಟೇ ಅಲ್ಲದೆ ನಿಮ್ಮ ಕೈಕಾಲಿಗೆ ನಾವು ಜವಾಬ್ದಾರರಲ್ಲ ಅಂತ ಮೆಟ್ರೋ ಬೋರ್ಡ್ ಕೂಡ ಹಾಕಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕ್‍ನಿಂದ ಈಗ ಮೆಟ್ರೋ ಬೆಸ್ಟ್. ಆದರೆ ಅಲ್ಲಲ್ಲಿ ಮೆಟ್ರೋ ಪಿಲ್ಲರ್ ಬಿರುಕು ಕಥೆ ಪ್ರಯಾಣಿಕರ ಎದೆ ನಡುಗಿಸುತ್ತಿದೆ. ಈಗ ಮೆಟ್ರೋ ಸ್ಟೇಷನ್‍ನ ಕೋಟಿ ವೆಚ್ಚದ ಗ್ರ್ಯಾನೈಟ್ ತುಂಬಾ ನುಣುಪಾಗಿದ್ದು, ಜಾರಿಬೀಳೋರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ವಯಸ್ಸಾದವರು ಮಕ್ಕಳಿಗಂತೂ ಸಿಕ್ಕಾಪಟ್ಟೆ ಅಪಾಯಕಾರಿಯಾಗಿದೆ.
Advertisement
Advertisement
ಹೀಗೆ ಜಾರಿ ಬೀಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸ್ಟೇಷನ್‍ನಲ್ಲಿ “ನೆಲ ನುಣುಪಾಗಿದೆ ನಿಧಾನವಾಗಿ ನಡೆದಾಡಿ” ಅಂತ ಹೊಸ ಎಚ್ಚರಿಕೆ ಫಲಕಗಳನ್ನ ಹಾಕಲಾಗಿದೆ. ಈ ಹಿಂದೆ ಎಸ್ಕಲೇಟರ್ ಬಳಿ ಜಾಲರಿಯನ್ನು ಹಾಕದೇ ಒಂದು ಮಗು ಜೀವ ಬಿಟ್ಟಿದೆ. ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ ಪ್ರಯಾಣಿಕರು ಸುಗುಮವಾಗಿ ನಡೆದಾಡುವಂತ ನೆಲಹಾಸಿಗೆಯನ್ನ ಹಾಕಬೇಕಿದೆ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.