ಚಿಕ್ಕಬಳ್ಳಾಪುರ: ಈಗ ಬೇಸಿಗೆ ಕಾಲ ಮನೆಯ ಕಿಟಕಿ ಬಾಗಿಲೆಲ್ಲ ತೆಗಿದ್ರು ಒಂದಿಷ್ಟು ತಂಪಾದ ಗಾಳಿ ಬರೋದು ಡೌಟ್. ಅಬ್ಬಬ್ಬಾ ಏನ್ ಸೆಖೆ ಅಂತ ಜನ ಗೊಣಗಾಡೋದು ಸಾಮಾನ್ಯ. ಹೀಗಾಗೆ ಸಾಕಷ್ಟು ಜನ ರಾತ್ರಿಯಾದ್ರೆ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗೋದು ವಾಡಿಕೆ. ನೀವೂ ಇದೇ ರೀತಿ ರಾತ್ರಿ ವೇಳೆ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗೋಕೆ ಹೋಗ್ತಿದ್ರಾ ಹಾಗಾದ್ರೆ ಒಮ್ಮೆ ಈ ಸ್ಟೋರಿ ಓದಿ.
Advertisement
ಹೌದು. ಬೇಸಿಗೆ ಕಾಲ (Summer Season), ಎಲ್ಲೆಲ್ಲೂ ಬಿಸಿಯ ಅನುಭವ. ಬಿಸಿಯ ಧಗೆಗೆ ಮನೆಯಲ್ಲಿರೋಕೆ ಕಷ್ಟ. ಹಾಗಾಗಿ ಮನೆಗಳ ಮಹಡಿ ಮೇಲೆ ಮಲಗೋದು ಹಲವರ ಅಭ್ಯಾಸ. ಸೆಖೆ ತಾಳಲಾರದೆ ಮನೆಯವರೆಲ್ಲಾ ಮಹಡಿ ಮೇಲೆ ಮಲಗಿದ್ದ ವೇಳೆ ಮನೆಗೆ ನುಗ್ಗಿರೋ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ದೋಚಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಇಸ್ಲಾಂ ನಗರದಲ್ಲಿ ನಡೆದಿದೆ. ಅಂದಹಾಗೆ ತೋಟದಲ್ಲಿ ಸೀನಪ್ಪ ಎಂಬವರು ಮನೆಯನ್ನ ಕಟ್ಟಿಕೊಂಡಿದ್ದು, ಕಳೆದ ಕೆಲ ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ಪ್ರತಿ ಬಾರಿ ಬೇಸಿಗೆ ಕಾಲದಲ್ಲಿ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗುವುದು ಈ ಕುಟುಂಬಕ್ಕೆ ರೂಢಿಯಾಗಿದೆ. ಅದೇ ರೀತಿ ಶನಿವಾರ ಕೂಡ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಮನೆಯ ಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ (Gold Theft) ಮತ್ತು ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
Advertisement
Advertisement
ಮುಂಜಾನೆ ಮನೆಯೊಳಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಬೆಡ್ ರೂಂನ ಕಬೋರ್ಡ್ ಎಲ್ಲಾ ಹುಡುಕಾಡಿದ್ದು, ನೂರು ಗ್ರಾಂ ಚಿನ್ನ 150 ಗ್ರಾಂ ಬೆಳ್ಳಿ ನಗದು ಸೇರಿದಂತೆ 10 ಲಕ್ಷ ಮೌಲ್ಯದ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಮಾಲೀಕರು ಮಹಡಿ ಮೇಲೆ ಇರುವಾಗಲೆ ಕಳ್ಳರು ರಾಜಾರೋಷವಾಗಿ ಮನೆ ಕಳ್ಳತನ ಮಾಡಿರುವುದು ಕುಟುಂಬಸ್ಥರು ಸೇರಿದಂತೆ ಪಟ್ಟಣದ ಜನರನ್ನ ಬೆಚ್ಚಿ ಬೀಳಿಸಿದೆ.
Advertisement
ಮೇಲ್ನೋಟಕ್ಕೆ ಯಾರೋ ಗೊತ್ತಿರುವವರೇ ಮನೆಯವರು ಮಹಡಿ ಮೇಲೆ ಮಲಗಿರುವುದನ್ನ ಕಂಡು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಈ ಸಂಬಂಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕಾರ್ಕಳ ಅಖಾಡದಲ್ಲಿ ಮುಟ್ಟಾಳ ಫೈಟ್- ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಕೌಂಟರ್