ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರ!

Public TV
1 Min Read
SWIMMING

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರವಾಗಿರಿ. ಸ್ವಿಮ್ಮಿಂಗ್ ಮಾಡುತ್ತಿರುವಾಗಲೇ ಮೊಬೈಲ್ ಮತ್ತು ಪರ್ಸ್ ಕಳ್ಳತನ ಮಾಡುತ್ತಿದ್ದಾರೆ.

ವಿಜಯನಗರದ ಈಜುಕೊಳದಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಮತ್ತು ಹಣವನ್ನು ಕಳ್ಳತನ ಮಾಡುತ್ತಿದ್ದಾರೆ. ಎಷ್ಟು ಜನ ಸ್ವಿಮ್ಮಿಂಗ್ ಪೂಲ್ ಹೋಗುತ್ತಾರೆ. ಯಾರು ಕಾರಿನಲ್ಲಿ ಬಂದಿದ್ದಾರೆ. ಯಾರ್ ಯಾರ್ ಮೊಬೈಲ್ ತಂದಿದ್ದಾರೆ ಎಂದು ಕಳ್ಳರು ಮೊದಲೇ ಗಮನಿಸುತ್ತಾರೆ. ಬಳಿಕ ಟಿಕೆಟ್ ಪಡೆದು ಸ್ವಿಮ್ಮಿಂಗ್ ಪೂಲ್ ಒಳಗೆ ಕಳ್ಳರ ಗ್ಯಾಂಗ್ ಹೋಗುತ್ತದೆ.

ಸ್ವಿಮ್ಮಿಂಗ್ ಮಾಡಲು ಬಂದವರು ತಮ್ಮ ಉಡುಪುಗಳನ್ನು ಕಳಚಿ ಸ್ವಿಮ್ಮಿಂಗ್ ಮಾಡಲು ಹೋಗುತ್ತಾರೆ. ಆದರೆ ಅವರು ಸ್ವಿಮ್ಮಿಂಗ್ ಮುಗಿಸಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಮೊಬೈಲ್ ಮತ್ತು ಹಣವನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಹಣ, ಮೊಬೈಲೆ ಕಳೆದುಕೊಂಡವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಮಪ್ತಿಯಲ್ಲಿ ಪೊಲೀಸರು ಸ್ವಿಮ್ಮಿಂಗ್ ಪೂಲ್ ಗೆ ಬಂದು ಕಾರ್ಯಾಚರಣೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಗ್ಯಾಂಗ್ ಲಿಡರ್ ಅಬ್ಬರ್. ಈತ ತನ್ನ ಮಗನನ್ನು ನೋಡಲು ಮನೆ ಬಳಿ ಬರುತ್ತಿದ್ದ ಮಗನ ಸ್ನೇಹಿತರನ್ನು ಕಳ್ಳತನಕ್ಕೆ ಕರೆದುಕೊಂಡು ಹೋಗಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *