ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಂತೆ ನಗರದಲ್ಲಿ ಬರೋಬ್ಬರಿ 1,250 ಕೋಟಿಯ ಬೃಹತ್ ಹಗರಣವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ವಿಕ್ರಂ ಇನ್ವೆಸ್ಟ್‍ಮೆಂಟ್ ಕಂಪೆನಿಯಿಂದ ಈ ಬೃಹತ್ ವಂಚನೆ ನಡೆದಿದ್ದು, ರಾಘವೇಂದ್ರ ಶ್ರೀನಾಥ್, ಸೂತ್ರಂ ಸುರೇಶ್, ನರಸಿಂಹಮೂರ್ತಿ, ಪ್ರಹ್ಲಾದ್ ಸೇರಿದಂತೆ ವಂಚೆನಯ ಪ್ರಮುಖ ಆರೋಪಿಗಳಾಗಿದ್ದಾರೆ.
Advertisement
Advertisement
ರಾಘವೇಂದ್ರ ಶ್ರೀನಾಥ್ ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿ ಎಂಡಿಯಾಗಿದ್ದು, ಸೂತ್ರಂ ಸುರೇಶ್ ಮಾಜಿ ಕ್ರೀಡಾ ವರದಿಗಾರನಾಗಿದ್ದಾನೆ. ಇವರುಗಳು ಖ್ಯಾತ ಕ್ರೀಡಾಪಟುಗಳು, ರಾಜಕಾರಣಿಗಳು, ಸಿನಿಮಾ ನಟರನ್ನೇ ಗುರಿಯಾಗಿಸಿಕೊಂಡು ಪಂಗನಾಮ ಹಾಕಿದ್ದಾರೆ.
Advertisement
Advertisement
ಹೆಚ್ಚಿನ ಲಾಭಾಂಶ ನೀಡೋದಾಗಿ ಕೋಟಿಗಟ್ಟಲೇ ಹಣ ಇನ್ವೆಸ್ಟ್ ಮಾಡಿಸಿದ್ದಾರೆ. ಒಬ್ಬೊಬ್ಬರು ಏನಿಲ್ಲವೆಂದ್ರೂ ಎಂಟರಿಂದ ಹತ್ತು ಕೋಟಿ ಹೂಡಿಕೆ ಮಾಡಿದ್ದಾರೆ. ಖ್ಯಾತ ಕ್ರಿಕೆಟಿಗ, ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆಗೆ ಕೋಟಿ ಕೋಟಿ ಮೋಸ ಮಾಡಿದ್ದಾರೆ.
ಸ್ಟಾಕ್ ಕಮಾಡಿಟೀಸ್ ಮೇಲೆ ಹಣ ಹೂಡಿಕೆ ಮಾಡುವುದಾಗಿ ಅಂತಾ ಹೇಳಿ ಕಳೆದ ಅಕ್ಟೋಬರ್‍ನಿಂದ ಆರೋಪಿಗಳು ಯಾರಿಗೂ ಲಾಭಾಂಶ ನೀಡಿಲ್ಲ. ಸದ್ಯ ಇವರಿಂದ ವಂಚನೆಗೊಳಗಾದವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಬನಶಂಕರಿ ಪೊಲೀಸರು ಐವರನ್ನು 14 ದಿನ ವಶಕ್ಕೆ ಪಡೆದಿದ್ದಾರೆ.