ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಡಿದೆ.
ಚುನಾವಣಾ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸೂಕ್ಷ್ಮವಾಗಿಸಲು ಆಯೋಗ ನೋಟಿಸ್ ನೀಡಿದೆ. ಈ ಪ್ರಕಾರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನ ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಹಾಗೇ 10 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಾಪಸ್ ಪಡೆದರೆ ತೆರಿಗೆ ಇಲಾಖೆಗೆ ನೇರವಾಗಿ ಮಾಹಿತಿ ಹೋಗುತ್ತದೆ.
Advertisement
Advertisement
ಈ ಪ್ರಕಾರ ಮುಂದಿನ ಒಂದುವರೆ ತಿಂಗಳು ಖಾತೆಗಳ ಮೇಲೆ ನಿಗಾ ಇಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ದೈನಂದಿನ ಖರ್ಚನ್ನ ನೇರವಾಗಿ ಚುನಾವಣಾ ಕ್ಯಾಮಾರಾ ಸಿಬ್ಬಂದಿ ಸೆರೆ ಹಿಡಿದ ದೃಶ್ಯಗಳ ಆಧಾರದಲ್ಲಿ ಆಡಿಟ್ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಖರ್ಚು ಮಾಡಿದರೆ 24 ಗಂಟೆಯೊಳಗೆ ಕಠಿಣ ಕ್ರಮ ವಹಿಸಲಾಗುತ್ತದೆ.
Advertisement
ಒಂದು ವೇಳೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿದರೆ ಆದಾಯ ಇಲಾಖೆ ಖಾತೆದಾರರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಯಾವ ಖರ್ಚಿಗೆ ಹಣ ಡ್ರಾ ಮಾಡಿದ್ದೀರ, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಾ? ಎಂದು ಅವರ ಬಳಿ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತದೆ.
Advertisement