ಬೆಂಗಳೂರು: ಟಿಕ್ ಟಾಕ್ ಮಾಡುವುದು ಈಗಿನ ಫ್ಯಾಶನ್ ಆಗಿದೆ. ದೊಡ್ಡವರಿಂದ ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಾರೆ. ಅದನ್ನು ಮಾಡುವ ಮುನ್ನ ಎಚ್ಚರವಾಗಿರಿ ಏಕೆಂದರೆ ಕೆಲ ಕಿರಾತಕರು ಟಿಕ್ ಟಾಕ್ ವಿಡಿಯೋ ಬಳಸಿ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಟ್ರೋಲ್ ಮಾಡುತ್ತಿದ್ದಾರೆ.
ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ನಿವಾಸಿ ರಮ್ಯಾಗೆ ಟಿಕ್ ಟಾಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡುವುದು ಎಂದರೆ ತುಂಬಾನೇ ಇಷ್ಟ. ಕಳೆದ 1 ತಿಂಗಳಿನಿಂದ ರಮ್ಯಾ ಮಾಡಿರುವ ಟಿಕ್ ಟಾಕ್ ವಿಡಿಯೋಗಳಿಗೆ ತುಂಬಾನೇ ಲೈಕ್ಸ್ ಬರುತ್ತಿತ್ತು. ಇದನ್ನು ನೋಡಿದ ಕೆಲ ಪುಂಡ ಹುಡುಗರ ಗುಂಪು, ರಮ್ಯಾ ವಿಡಿಯೋ ಬಳಸಿ ಅಶ್ಲೀಲ ಆಡಿಯೋ ಸೇರಿಸಿ ಮತ್ತೊಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
Advertisement
Advertisement
ಬಳಿಕ ಟಿಕ್ ಟಾಕ್‍ನಲ್ಲಿ ಕ್ಷಮೆ ಕೇಳುವಂತೆ ಕಿಡಿಗೇಡಿಗಳು ವಾರ್ನ್ ಮಾಡಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ರಮ್ಯಾಳ ಕಾಲೇಜ್ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ಹಿಂಗೆಲ್ಲ ಮಾಡಿದ್ರೆ ಸರಿ ಇರಲ್ಲ, ಮೊದಲು ವಿಡಿಯೋ ಡಿಲೀಟ್ ಮಾಡು ಎಂದು ಧಮ್ಕಿ ಹಾಕಿ ಹೋಗಿದ್ದಾರೆ ಎನ್ನಲಾಗಿದೆ.
Advertisement
ಯುವತಿ ವಿಡಿಯೋ ಬಳಸಿಕೊಳ್ಳಿ ಆದರೆ ಟ್ರೋಲ್ ಮಾಡಬೇಡಿ ಎಂದರೂ ಅವರು ಕೇಳುತ್ತಿಲ್ಲ. ಇದರಿಂದ ನೊಂದ ಯುವತಿ ರಮ್ಯಾ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv