ಬೆಂಗಳೂರು: ಮನೆ ಕೆಲಸಕ್ಕೆ ನೇಪಾಳ ಮೂಲದ ಜನರನ್ನ (Nepalese) ನೇಮಿಸಿಕೊಂಡಿದ್ದೀರಾ, ಹಾಗಾದ್ರೆ ಹುಷಾರಾಗಿರಿ. ಬೆಂಗಳೂರು ಪೊಲೀಸರೇ (Bengaluru Police) ಈ ಮಾತು ಹೇಳ್ತಿದ್ದಾರೆ.
ಹೌದು. ಕಡಿಮೆ ಸಂಬಳ, ಹೇಳಿದಷ್ಟು ಕೆಲಸ ಮಾಡ್ತಾರೆ. ಯಾವುದೇ ಕಿರಿಕ್ ಇರಲ್ಲ, ಅವರ ಪಾಡಿಗೆ ಕೆಲಸ ಮಾಡ್ಕೊಂಡು ಹೋಗ್ತಾರೆ. ಇದು ನೇಪಾಳ ಮೂಲದ ಕೆಲಸಗಾರರ ಮೇಲೆ ಜನರಿಗೆ ಇರುವ ಅಭಿಪ್ರಾಯ. ಆದ್ರೆ ಪೊಲೀಸರ ಅಂಕಿ ಅಂಶ, ಕ್ರೈಂ ಸ್ಟೋರಿಗಳು, ಹೇಳೋದೆ ಬೇರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ
Advertisement
Advertisement
ಈ ವರ್ಷದ 11 ತಿಂಗಳಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಶ್ರೀಮಂತರ ಮನೆಗಳಲ್ಲಿ ಕಳ್ಳತನವಾಗಿದೆ. ಅವುಗಳಲ್ಲಿ ಬಹುತೇಕ ಮನೆಗಳಲ್ಲಿ ಕಳ್ಳತನ ಮಾಡಿರೋದು ನೇಪಾಳಿ (Nepalese) ಮೂಲದವರೇ ಅನ್ನೋದು ಒಪ್ಪಿಕೊಳ್ಳಲೇಬೇಕಾದ ಸತ್ಯ ಸಂಗತಿ. ತುಂಬಾ ನಂಬಿಕಸ್ಥರಂತೆ ವರ್ತಿಸೋ ನೇಪಾಳಿ ಮೂಲದ ಕೆಲವರು, ಬೆಳಗಾಗೊ ಹೊತ್ತಿಗೆ ಮನೆಯನ್ನೆಲ್ಲಾ ಗುಡಿಸಿ ಗುಂಡಾತರ ಮಾಡಿ ಎಸ್ಕೇಪ್ ಆಗಿರ್ತಾರೆ. ದರೋಡೆ ವಿಚಾರ ಪೊಲೀಸರ ಕಿವಿ ತಲುಪೋ ಹೊತ್ತಿಗೆ ಆರೋಪಿಗಳು ಅರಾಮಾಗಿ ನೇಪಾಳ ಬಾರ್ಡರ್ ಕ್ರಾಸ್ ಆಗಿರ್ತಾರೆ. ಹಾಗಾಗಿ ನೇಪಾಳಕ್ಕೆ ಹೋದ ಕಳ್ಳರು, ಕದ್ದ ಐಟಂ ವಾಪಸ್ ಸಿಗೋದು ಬಹುತೇಕ ಡೌಟು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಾರೂ ಯಾರನ್ನು ಮುಗಿಸಲು ಸಾಧ್ಯವಿಲ್ಲ, ನನಗೆ ನನ್ನದೇ ಆದ ಶಕ್ತಿ ಇದೆ: ಬಿಎಸ್‍ವೈ
Advertisement
Advertisement
ಆಶ್ಚರ್ಯ ಅನ್ನಿಸಿದ್ರು ಇದು ನಿಜ. ಬೆಂಗಳೂರಿನ ಹನುಮಂತ ನಗರದಲ್ಲಿ (Hanumantha Nagar Police) ಇಂತಹದ್ದೊಂದು ಘಟನೆ ನಡೆದಿದೆ. ಇಲ್ಲಿನ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ಲಲಿತ್ ಮತ್ತು ಬಹದ್ದೂರ್ ಅನ್ನೋರು ಕೆಲಸಕ್ಕಿದ್ರು. ತುಂಬಾ ನಂಬಿಕಸ್ಥರಾಗಿದ್ದ ಕಾರಣ ಮನೆಯವರಿಗೆ ಯಾವುದೇ ಡೌಟ್ ಬಂದಿರಲಿಲ್ಲ. ಕಳೆದ ವಾರ ಉದ್ಯಮಿ ಕುಟುಂಬ ಸಮೇತ ಸಿಂಗಾಪುರ್ ಟ್ರಿಪ್ ಹೋಗಿದ್ರು. ಅವರು ವಿದೇಶಕ್ಕೆ ಹಾರುತ್ತಿದ್ದಂತೆ, ದಂಪತಿ ಮನೆಯಲ್ಲಿಟ್ಟಿದ್ದ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಡೈಮಂಡ್ ರಿಂಗ್, ವಜ್ರದ ವಸ್ತುಗಳು ಸೇರಿ ಬರೋಬ್ಬರಿ ಎರಡೂವರೆ ಕೋಟಿಯಷ್ಟು ಮೌಲ್ಯದ ವಸ್ತುಗಳನ್ನು ದೋಚಿ ಸೈಲೆಂಟ್ ಆಗಿ ನೇಪಾಳ ಸೇರ್ಕೊಂಡಿದ್ದಾರೆ. ವಾಪಸು ಮನೆಗೆ ಬಂದು ನೋಡುವಷ್ಟರಲ್ಲಿ ಕೆಲಸಗಾರರ ಕೈಚಳಕ ಗೊತ್ತಾಗಿ ಸಿಸಿಟಿವಿ ಚೆಕ್ ಮಾಡಿದ್ದಾರೆ. ಎರಡು ಬ್ಯಾಗ್‌ಗಳಲ್ಲಿ ಲೆಗೇಜ್ ರೀತಿಯಲ್ಲಿ ಹಣ, ಚಿನ್ನಾಭರಣ ತುಂಬಿಕೊಂಂಡು ಎಸ್ಕೇಪ್ ಆಗಿರೋದು ಪತ್ತೆಯಾಗಿದೆ.
ಈ ಸಂಬಂಧ ಹನುಮಂತನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಾಗಾಗಿ ದೂರದ ನೇಪಾಳಿಗಳು, ಸೇರಿದಂತೆ ಅಪರಿಚಿತರನ್ನು ಮನೆ ಕೆಲಸಕ್ಕೆ ನೇಮಿಸುವ ಮುನ್ನ ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.