ಬೆಂಗಳೂರು: ಮಾವು ಎಂದು ಮಾವಿನ ಹಣ್ಣಿನ ಸೀಸನ್‍ನಲ್ಲಿ ಚಪ್ಪರಿಸಿಕೊಂಡು ತಿನ್ನೋರು ಈ ಸುದ್ದಿ ಓದಿ. ಯಾಕೆಂದರೆ ರಸಭರಿತ ಕಲರ್ ಫುಲ್ ಮಾವಿನ ಬಣ್ಣ ಟೇಸ್ಟ್ ಹಿಂದೆ ಜೀವತೆಗೆಯುವ ವಿಷ ಇದೆ. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ವಿಷದ ಮಾವಿನ ಅಸಲಿ ಮುಖ ಸೆರೆಯಾಗಿದೆ.
ವಿಷದ ರಾಸಾಯನಿಕವನ್ನು ಬಳಸಿ ಎಳೆಯ ಮಾವು ಬೇಗ ಮಾಗುವಂತೆ ಮಾಡುತ್ತಾರೆ. ಅಲ್ಲದೆ ಇದರಿಂದ ಮಾವು ಕಲರ್ ಕೂಡ ಬರುತ್ತೆ. ಗ್ರಾಹಕರನ್ನು ಮರಳು ಮಾಡಲು ಈ ರೀತಿಯ ವಿಷದ ರಾಸಾಯನಿಕ ಬೆರೆಸುತ್ತಾರೆ. ಅಂದಹಾಗೆ ಬೆಂಗಳೂರಿನ ಜೆಸಿ ರಸ್ತೆಯ ಬೃಹತ್ ಮಾವುಗಳ ಶಾಪ್‍ನಲ್ಲಿ ಈ ರೀತಿ ವಿಷ ಬೆರೆಸಲಾಗುತ್ತಿದ್ದು, ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.
Advertisement
Advertisement
ಹಣದ ಆಸೆಗಾಗಿ ಕಾಯಿ ಇರುವ ಮಾವಿನಹಣ್ಣನ್ನು ಮಾಗುವಂತೆ ಮಾಡುತ್ತಾರೆ. ಮರದಿಂದ ಇಳಿಸಿದ ಮಾವಿನಕಾಯಿಗಳಿಗೆ ಮೋಸ್ಟ್ ಡೇಂಜರಸ್ ಕಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಹಾಗೂ ಇಥ್ರೇಲ್‍ನ್ನು ಹಾಕಿ ಮಾಗುವಂತೆ ಮಾಡ್ತಾರೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Advertisement
Advertisement
ವಿಷದ ಹಣ್ಣು ತಿಂದ್ರೆ ಏನಾಗಬಹುದು?
* ಕಾರ್ಬೈಡ್ ರಾಸಾಯನಿಕ ಬೆರೆಸಿದ ಮಾವು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ
* ಹೊಟ್ಟೆನೋವು, ವಾಂತಿ ಭೇದಿಯಾಗುವ ಸಾಧ್ಯತೆ
* ಬಾಯಿಹುಣ್ಣು, ಬಾಯಿ ಕ್ಯಾನ್ಸರ್, ಕರುಳುಬೇನೆಯಂತಹ ಮಾರಣಾಂತಿಕ ಕಾಯಿಲೆಯೂ ಬರಬಹುದು
ಈಗ ರಾಸಾಯನಿಕ ಬಳಸಿಯೇ ಮಾವಿನ ಹಣ್ಣನ್ನು ಮಾಗಿಸೋದು ಕಾಮನ್ ಆಗಿದೆ. ಆದ್ದರಿಂದ ಮಾವಿನ ಹಣ್ಣನ್ನು ತಿನ್ನೋವಾಗ ಜೋಪಾನವಾಗಿರಿ. ಅಲ್ಲದೆ ಸಾಧ್ಯವಾದಷ್ಟು ಹಣ್ಣನ್ನು ತೊಳೆದು ತಿನ್ನೋದನ್ನು ರೂಢಿಸಿಕೊಳ್ಳಿ.