– ಕೊಡಗಿನಲ್ಲಿ ಮಹಿಳೆಗೆ ಶಾಕ್
ಮಡಿಕೇರಿ: ಬೇಸಿಗೆ ಶುರುವಾಯಿತು ಅಂದರೆ ಸಾಮಾನ್ಯವಾಗಿ ಮನೆಯವರು ಮಕ್ಕಳು ಸೇರಿದಂತೆ ಅನೇಕರು ಐಸ್ ಕ್ರೀಂ, ಐಸ್ ಕ್ಯಾಂಡಿ, ಕುಲ್ಫಿ ಮೊರೆ ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಯಾಕೆಂದರೆ ನೀವು ತಿನ್ನುವ ಕುಲ್ಫಿಯಲ್ಲಿ ಬ್ಲೇಡ್ ಇರುತ್ತೆ. ಇಂತದೊಂದು ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿ ನೂರಾರು ಮಂದಿ ಜನ ಸೇರಿದ್ದರು. ವಾಹನವೊಂದರಲ್ಲಿ ಕುಲ್ಫಿ ಮಾರಾಟ ಮಾಡಲಾಗಿತ್ತು. ಅಲ್ಲಿ ಮಹಿಳೆಯೊಬ್ಬರು ತಮ್ಮ ಮಕ್ಕಳಿಗೂ ಸೇರಿದಂತೆ ಒಟ್ಟು ಮೂರು ಕುಲ್ಫಿ ಕೊಂಡುಕೊಂಡಿದ್ದಾರೆ. ಮನೆಗೆ ತೆರಳಿ ಎರಡು ಕುಲ್ಫಿಯನ್ನು ತಮ್ಮ ಮಕ್ಕಳಿಗೆ ನೀಡಿ ತಾವೂ ಕೂಡ ಒಂದು ಕುಲ್ಫಿಯನ್ನು ತಿನ್ನುತ್ತಿದ್ದರು.
Advertisement
Advertisement
ಈ ವೇಳೆ ಅರ್ಧ ಕುಲ್ಫಿ ತಿನ್ನುತ್ತಿದ್ದಾಗ ಕುಲ್ಫಿಯಲ್ಲಿ ಪೂರ್ಣ ಬ್ಲೇಡ್ ಕಾಣಿಸಿಕೊಂಡಿತು. ಎಚ್ಚೆತ್ತುಕೊಂಡ ಮಹಿಳೆ ಕುಲ್ಫಿ ಬಿಸಾಡಿದ್ದಾರೆ. ಕೊಡಗಿನ ನಾಪೋಕ್ಲುವಿನ ಕುಲ್ಫಿ ತಯಾರಿಕಾ ಘಟಕವೊಂದು ಈ ಬ್ಲೇಡ್ ಹಾಕಲಾಗಿದ್ದ ಕುಲ್ಫಿ ತಯಾರಿಸಲಾಗಿದೆ ಎನ್ನಲಾಗಿದೆ.
Advertisement
ಕುಲ್ಫಿ ತಯಾರಿಕಾ ಘಟಕದ ಸಿಬ್ಬಂದಿಯೊಬ್ಬ ನಿರ್ಲಕ್ಷ್ಯ ವಹಿಸಿ ಆತನ ಅಜಾಗರೂಕತೆಯಿಂದ ಕುಲ್ಫಿಯ ಕಡ್ಡಿಯ ಮಧ್ಯೆ ಬ್ಲೇಡ್ ಸಿಲುಕಿಕೊಂಡಿತ್ತು. ಎಚ್ಚರಿಕೆ ವಹಿಸಿದ ಹಿನ್ನೆಲೆಯಲ್ಲಿ ಬ್ಲೇಡ್ ಕುಲ್ಫಿಯ ಒಳಗೆ ಉಳಿದುಕೊಂಡಿತ್ತು. ಅದೃಷ್ಟವಶಾತ್ ಅದನ್ನು ತಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.