ಬೆಂಗಳೂರು: OLXನಲ್ಲಿ ವಾಹನ ಖರೀದಿಸುವಾಗ ಎಚ್ಚರವಾಗಿರಿ. ಯಾಕೆಂದರೆ ಇಲ್ಲೊಬ್ಬ ಭೂಪ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ಮಾಡುತ್ತಿದ್ದಾನೆ.
ಸೈನಿಕ ಅಂತ ಹೇಳಿಕೊಂಡಿರುವ ವಿಕಾಸ್ ಪಟೇಲ್ ಎಂಬಾತ OLXನಲ್ಲಿ ಜನರಿಗೆ ಮೋಸ ಮಾಡಿದ್ದಾನೆ. ಬೆಂಗಳೂರಿನ ಆರ್ ಟಿಓ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ಗಾಡಿಯನ್ನು OLXನಲ್ಲಿ ಸೇಲ್ ಮಾಡಿದ್ದು, ಈಗಾಗಲೇ ಸಾಕಷ್ಟು ವಾಹನಗಳನ್ನು OLXನಲ್ಲಿ ಸೇಲ್‍ಗಿಟ್ಟು ಜನರಿಗೆ ಟೋಪಿ ಹಾಕಿದ್ದಾನೆ.
ಮೋಸ ಹೇಗೆ ಮಾಡುತ್ತಿದ್ದ;
ಮೊದಲಿಗೆ ವಾಹನವನ್ನು OLX ನಲ್ಲಿ ಸೇಲ್‍ಗಿಡುತ್ತಾನೆ. ಇದನ್ನು ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಾರೆ. ಬಳಿಕ ನೀವು ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಅಂತ ಹೇಳುತ್ತಾನೆ. ಅಷ್ಟೇ ಅಲ್ಲದೇ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಾನೆ. ಯೋಧ ಯಾವತ್ತು ಮೋಸ ಮಾಡಲಾರ ಅಂತ ಅಂದುಕೊಂಡ ಜನ ಈತನಿಗೆ ಪೇಟಿಯಂ ಮೂಲಕ ಹಣ ಕಳಿಸುತ್ತಾರೆ. ಆದರೆ ಇತ್ತ ತನ್ನ ಖಾತೆಗೆ ಹಣ ಬರುತ್ತಿದ್ದಂತೆ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.
ಬೆಂಗಳೂರು ಮೂಲದವ ಅಂತ ಹೇಳಿಕೊಂಡಿರುವ ವಿಕಾಸ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡೋದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾನೆ. ಈತ ಸೇಲ್‍ಗಿಟ್ಟಿರುವ ವಾಹನ ಬೆಂಗಳೂರು ಆರ್ ಟಿಓದಲ್ಲಿ ನೋಂದಾಣಿಯಾಗಿರುವಂತದ್ದು. ಈಗಾಗಲೇ ಗುರುಮೂರ್ತಿ ಹಾಗೂ ಫೈಜಲ್ ಸೇರಿದಂತೆ ಅನೇಕರು ಈತನನ್ನು ನಂಬಿ ಲಕ್ಷಾಂತರ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ನಕಲಿ ಸೈನಿಕನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv