ಬೆಂಗಳೂರು: ಚಳಿಗಾಲದಲ್ಲಿ ಹೃದಯ ಜೋಪಾನ. ಚಳಿಗಾಲದಲ್ಲಿ ಹೆಚ್ಚಾಗುತ್ತಿದೆ ಹೃದಯಘಾತದ ಸಮಸ್ಯೆ. ವೈದ್ಯರಿಂದ ರವಾನೆಯಾಗಿದೆ ಎಚ್ಚರಿಕೆಯ ಸಂದೇಶ. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆ ಇರೋರು ಎಚ್ಚರವಾಗಿರಬೇಕು.
Advertisement
ಚಳಿಗಾಲ (Winter) ಬಂತು ಅಂದ್ರೆ ದೇಹ ಸೋಮಾರಿತನ ಬಯಸುತ್ತೆ. ಕರಿದ ತಿಂಡಿಯತ್ತ ಮನಸು ಹಾತೊರೆಯುತ್ತೆ. ವಾಕಿಂಗ್ ಜಾಗಿಂಗ್ ವ್ಯಾಯಾಮಕ್ಕೆಲ್ಲ ಗುಡ್ ಬೈ ಹೇಳಿ ಚೆನ್ನಾಗಿ ಹೊದ್ದು ಮಲಗಿಬಿಡೋಣ ಅಂತಾ ಅಂದುಕೊಳ್ಳೋರೆ ಹೆಚ್ಚು. ಆದರೆ ಶಾಕಿಂಗ್ ವಿಚಾರವೆಂದರೆ ಚಳಿಗಾಲದ ಸಮಯದಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಿದೆಯಂತೆ. 32-40 ಪರ್ಸೆಂಟ್ ಹಾರ್ಟ್ ಆಟ್ಯಾಕ್‍ಗಳು ಚಳಿಗಾಲದಲ್ಲಿ ಆಗುತ್ತೆ ಅಂತಾ ವೈದ್ಯರು ಶಾಕಿಂಗ್ ವಿಚಾರ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!
Advertisement
Advertisement
ಚಳಿಗಾಲದಲ್ಲಿ ಹಾರ್ಟ್ ಆಟ್ಯಾಕ್ (Heart Attack) ಹೆಚ್ಚು: ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತನಾಳ ಸಂಕುಚಿತಗೊಂಡಿರುತ್ತೆ. ಹೀಗಾಗಿ ಬಿಪಿ (BP) ಇದ್ದವರಲ್ಲಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದವರಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೃದಯಾಘಾತ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟೋದು ಕೊಂಚ ಹೆಚ್ಚು. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನೋದ್ರಿಂದ ಕೆಲವರಲ್ಲಿ ಕೊಲೆಸ್ಟ್ರಾಲ್ (Cholesterol) ಪ್ರಮಾಣ ಕೊಂಚ ಹೆಚ್ಚಾಗುತ್ತೆ. ಬಹುತೇಕರು ವ್ಯಾಯಾಮ, ವಾಕಿಂಗ್ (Walking) , ಜಾಗಿಂಗ್ (Jogging) ಕಡಿಮೆ ಮಾಡೋದ್ರಿಂದ ದೈಹಿಕ ಚಟುವಟಿಕೆ ಕಡಿಮೆ. ಇದರಿಂದ ಹೃದಯಘಾತ ಹೆಚ್ಚಾಗುವ ಸಾಧ್ಯತೆಗಳು ಇರುತ್ತೆ ಎಂದು ವೈದ್ಯರು ಹೇಳುತ್ತಾರೆ.
Advertisement
ಚಳಿಗಾಲದಲ್ಲಿ `ಹೃದಯ’ದ ಬಗ್ಗೆ ಇರಲಿ ಎಚ್ಚರ: ಹೃದಯ ಸಂಬಂಧಿ ಸಮಸ್ಯೆ ಇದ್ರೆ ನಿಯಮಿತವಾಗಿ ಚಳಿಗಾಲದಲ್ಲಿ ಪರೀಕ್ಷೆ ಮಾಡಿಸಬೇಕು. ನಿಯಮಿತವಾಗಿ ಇಸಿಜಿ ಟೆಸ್ಟ್ ಮಾಡಿಸಬೇಕು. ತಾಜಾ ತರಕಾರಿ- ಹಣ್ಣುಗಳನ್ನು ಸೇವನೆ ಮಾಡಬೇಕು. ಕರಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ರಾಮಯ್ಯ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಅನುಪಮಾ.ವಿ ಹೆಗ್ಡೆ ಸಲಹೆ ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k