ಬೆಂಗಳೂರು: ಕೋಗಿಲು ಲೇಔಟ್ (Kogilu Layout) ಬೆನ್ನಲ್ಲೇ ಬೆಂಗಳೂರಿನ ಥಣಿಸಂದ್ರದಲ್ಲೂ (Thanisandra) ಆಪರೇಷನ್ ಡೆಮಾಲಿಶನ್ ಮುಂದುವರಿದಿದೆ. ಬಿಡಿಎ (BDA) ಅಧಿಕಾರಿಗಳು ಬೆಳಗ್ಗೆಯೇ ಅಖಾಡಕ್ಕಿಳಿದು ಅನಧಿಕೃತ ಶೆಡ್‌ಗಳನ್ನು ತೆರವು ಮಾಡಿದ್ದಾರೆ. ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಹೈಕೋರ್ಟ್ ಆದೇಶ ಮೇರೆಗೆ ಥಣಿಸಂದ್ರದಲ್ಲಿ 22 ಮನೆಗಳ ತೆರವು ಮಾಡಲಾಗಿದೆ. ಸದ್ಯ ತೆರವುಗೊಳಿಸಿದ 22 ಮನೆಗಳಲ್ಲಿ ಕಾರ್ ಗ್ಯಾರೇಜ್, ಗೋಡೌನ್, ಶೀಟ್ ಮನೆಗಳು ಇವೆ. ಅದರಲ್ಲೂ 22 ಮನೆಗಳಲ್ಲಿ ಇರುವವರೆಲ್ಲ ಬಾಡಿಗೆದಾರರು ಅಂತಾ ಗೊತ್ತಾಗಿದೆ. ಈ ಮನೆಗಳ ಮಾಲೀಕರು ಯಾರು, ಎಲ್ಲಿಯವರು, ಈಗ ಎಲ್ಲಿದ್ದಾರೆ ಎಂಬ ಯಾವ ಮಾಹಿತಿಯೂ ಸಿಕ್ಕಿಲ್ಲ. ಥಣಿಸಂಧ್ರದ ಎಸ್‌ಆರ್‌ಕೆ ಲೇಔಟ್‌ನಲ್ಲಿ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದು, ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಯಾವುದೇ ನೋಟಿಸ್ ಕೊಡದೇ ತೆರವು ಮಾಡಿದ ಆರೋಪವೂ ಕೇಳಿ ಬಂದಿದೆ. ಇದನ್ನೂ ಓದಿ: ಸಾರಿಗೆ ಬಸ್ ಡಿಕ್ಕಿ – ವಿದ್ಯಾರ್ಥಿಗೆ ಗಂಭೀರ ಗಾಯ
ಮನೆಯ ವಸ್ತುಗಳೆಲ್ಲಾ ಬೀದಿಪಾಲಾಗಿದ್ದು, ಪುಟ್ಟ ಮಕ್ಕಳನ್ನು ಅಂಗೈಯಲ್ಲಿ ಹಿಡಿದು ತಾಯಂದಿರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಇನ್ನು ಮನೆ ತೆರವು ವೇಳೆ ಕೈಯಲ್ಲಿ ವಿಷದ ಬಾಟಲಿ ಹಿಡಿದ ಕುಟುಂಬವೊಂದು ಆತ್ಮಹತ್ಯೆ ಬೆದರಿಕೆ ಹಾಕಿದೆ. ನಾವು 53 ಲಕ್ಷ ಕೊಟ್ಟು ಸ್ವಂತ ಮನೆ ಖರೀದಿ ಮಾಡಿದ್ದೇವೆ. ಇ-ಖಾತಾ, ದಾಖಲೆ ಎಲ್ಲಾ ಇದೆ. ಹೀಗಿದ್ದರೂ ಮನೆ ತೆರವು ಮಾಡಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ಹಿಂದೂ ವ್ಯಕ್ತಿ ದೀಪು ದಾಸ್ ಹತ್ಯೆ ಕೇಸ್ – ಪ್ರಮುಖ ಆರೋಪಿ ಬಂಧನ


