ಬೆಂಗಳೂರು: ಬಿಡಿಎ (BDA) ನಿವೇಶನ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಇದ್ದ ಅವಧಿಯನ್ನು ಕಡಿತ ಮಾಡಲಾಗಿದೆ.
ಹೌದು, ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಇದ್ದ ಅವಧಿಯನ್ನ ಕಡಿತ ಮಾಡಲಾಗಿದೆ. ಐದು ವರ್ಷದ ಕಾಲಮಿತಿಯನ್ನು ಕಡಿತಗೊಳಿಸಿ 3 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಖಾಲಿ ನಿವೇಶನದಲ್ಲಿ ಮೂರು ವರ್ಷಗಳಲ್ಲಿ ಮನೆ ನಿರ್ಮಾಣ ಮಾಡದೇ ಇದ್ದರೆ ಪ್ರಸ್ತುತ ಮಾರುಕಟ್ಟೆ ದರದ ಅನ್ವಯ ಶೇ.10% ದಂಡ ವಿಧಿಸಲಾಗುತ್ತೆ. ಇದನ್ನೂ ಓದಿ: ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ವಿಶೇಷ ರೈಲು
ಸಾಲ ಮಾಡಿ ನಿವೇಶನ ಖರೀದಿ ಮಾಡಿರುತ್ತೇವೆ. ಇದರಿಂದ ಪ್ರತಿ ನಿವೇಶನದಾರರಿಗೆ ಲಕ್ಷ ಲಕ್ಷ ರೂ. ಆರ್ಥಿಕ ಹೊರೆಯಾಗುತ್ತೆ ಎಂದು ನಿಯಮದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳ ಬೋರ್ಡ್ ಮೀಟಿಂಗ್‌ನಲ್ಲಿ ಬಿಡಿಎ ಈ ನಿರ್ಣಯ ಮಾಡಲಾಗಿದೆ. ಇನ್ನು ಬಿಡಿಎಯ ಈ ನಿರ್ಧಾರಕ್ಕೆ ಖಾಲಿ ನಿವೇಶನ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಖರೀದಿಸಿದ ನಿವೇಶನಕ್ಕೆ ನಮಗೆ ದಂಡ ವಿಧಿಸಿದ್ರೆ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಿಡಿಎಯ ಈ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸುತ್ತಿದ್ದಾರೆ. ಸಾಲ ಮಾಡಿ ನಿವೇಶನ ಖರೀದಿ ಮಾಡಿದ ನಮಗೆ ನಿವೇಶನ ಉಳಿಸಿಕೊಂಡಿದ್ದೇ ತಪ್ಪು ಎನ್ನುವ ಸ್ಥಿತಿಗೆ ಬಿಡಿಎ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸಾಗಿಸ್ತಿದ್ದ ಕ್ಯಾಂಟರ್‌ಗೆ ಲಾರಿ ಡಿಕ್ಕಿಯಾಗಿ ಸ್ಫೋಟ – ಇಬ್ಬರ ಸ್ಥಿತಿ ಗಂಭೀರ