Bengaluru CityDistrictsKarnatakaLatestLeading NewsMain Post

ಸುಪ್ರೀಂಕೋರ್ಟ್ ಕ್ಲಾಸ್ ಬೆನ್ನಲ್ಲೇ BDA ಆಯುಕ್ತ ರಾಜೇಶ್‌ಗೌಡ ಎತ್ತಂಗಡಿ

ಬೆಂಗಳೂರು: ಸುಪ್ರೀಂಕೋರ್ಟ್ ಛೀಮಾರಿ ಬೆನ್ನಲ್ಲೇ ಬಿಡಿಎ ಆಯುಕ್ತ ರಾಜೇಶ್‌ಗೌಡರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ರಾಜೇಶ್‌ಗೌಡಗೆ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ್ದು, ಬಿಡಿಎ ಆಯುಕ್ತರಾಗಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್‌ಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಇದನ್ನೂ ಓದಿ: ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಠಾಣೆಯ ಸಮೀಪದಲ್ಲೇ ಸಾಮೂಹಿಕ ಅತ್ಯಾಚಾರ

ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಬಹಳಷ್ಟು ಗಣ್ಯರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿದ ಕಾರಣಕ್ಕೆ ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡಗೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಕ್ಲಾಸ್ ತೆಗೆದುಕೊಂಡಿತ್ತು. ಕೋರ್ಟ್ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ರಾಜೇಶ ಗೌಡರನ್ನು ವರ್ಗಾವಣೆ ಮಾಡಬೇಕು ಎಂದು ಬೊಮ್ಮಾಯಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಬೆನ್ನಲ್ಲೇ ರಾಜೇಶ್ ಗೌಡ ಕೋರ್ಟ್ ಕ್ಷಮೆ ಕೇಳಿದ್ರು. ಆದ್ರೆ ಇದನ್ನು ಕೋರ್ಟ್ ಮನ್ನಿಸಿರಲಿಲ್ಲ. ತಪ್ಪು ಮಾಡಿ ಕ್ಷಮೆ ಕೇಳಿದರೇ ಹೇಗೆ? ಆದೇಶಕ್ಕೆ ಬೆಲೆ ಇಲ್ವೆ? ಎಂದು ಪ್ರಶ್ನಿಸಿತ್ತು. ಅಸಲಿಗೆ ಜಿ-ಕೆಟಗರಿ ನಿವೇಶನ ಹಂಚಿಕೆಯೇ ಅಕ್ರಮ ಎಂದಿತ್ತು. ಇದನ್ನೂ ಓದಿ: BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅಧಿಕಾರಿಗಳು ರಾಜಕೀಯ ಒತ್ತಡ ಇಲ್ಲದೇ ಏನು ಮಾಡೋಕೆ ಆಗಲ್ಲ. ಫಲಾನುಭವಿಗಳು ಇದರ ನೈತಿಕ ಹೊಣೆ ಹೊರಬೇಕು. ದುರುಪಯೋಗಪಡಿಸಿಕೊಂಡ ಸಚಿವರು ರಾಜೀನಾಮೆ ಕೊಡೋದು ಸೂಕ್ತ ಎಂದು ಕುಟುಕಿದ್ದರು.

Live Tv

Leave a Reply

Your email address will not be published.

Back to top button