ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸರ್ಕಾರದಿಂದ ಯಾವುದೇ ಯೋಜನೆ ಪಡೆಯಬೇಕೆಂದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕಿದೆ. ತಾನು ಯೋಜನೆಯ ಪ್ರಯೋಜನ ಪಡೆಯಬೇಕಾದರೆ, ಇಷ್ಟು ಕಮಿಷನ್ ಕೊಡಬೇಕು ಎಂದು ಮಧ್ಯವರ್ತಿಯೇ ನಿಗದಿ ಮಾಡುತ್ತಾರೆ. ಒಮ್ಮೆ ಅವರು ಕಮಿಷನ್ ಪಡೆದು ಒಪ್ಪಿಗೆ ಕೊಟ್ಟರೆ, ಅಲ್ಲಿಗೆ ಆ ಕೆಲಸ ಮುಗಿಯಿತು ಎಂದೇ ಅರ್ಥ.
Advertisement
ಹೀಗೆ ಕಮಿಷನ್ ಪಡೆಯುತ್ತಿರುವ ಮಧ್ಯವರ್ತಿಗಳು ಅಧಿಕಾರಿಗಳ ಸರಿಸಮನಾಗಿ ಆಸ್ತಿ ಮಾಡುತ್ತಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಮಂಗಳವಾರ ಬಿಡಿಎ ಕಚೇರಿಯ ಮಧ್ಯವರ್ತಿ ಮೋಹನ್ ಎಂಬವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
Advertisement
Advertisement
ಬ್ರೋಕರ್ ಮೋಹನ್ ಎಂಬವರ ಮನೆಯಲ್ಲಿ 5 ಕೆಜಿ ಚಿನ್ನ, ಬೆಳ್ಳಿ ತಟ್ಟೆ, ಲೋಟ, ದೀಪದ ಕಂಬಗಳು ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರಿದಿದ್ದು, ಇದರೊಂದಿಗೆ ಅಧಿಕಾರಿಗಳು ಚಿನ್ನ – ಬೆಳ್ಳಿ ಖರೀದಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
Advertisement
ಈಚೆಗಷ್ಟೇ ಬಿಡಿಎ ಅಧ್ಯಕ್ಷ ವಿಶ್ವನಾಥ್ ಸರ್ಕಾರಿ ಯೋಜನೆ ದಾಖಲೆಗಳೆಲ್ಲವೂ ಮಧ್ಯವರ್ತಿಗಳ ಮನೆಯಲ್ಲಿವೆ ಎಂದು, ಖುದ್ದು ಮೋಹನ್ ವಿರುದ್ಧ ಆರೋಪ ಮಾಡಿದ್ದರು.
ಈ ಸಂಬಂಧ ವಿಶ್ವನಾಥ್ ಹಾಗೂ ಹಿಂದಿನ ಬಿಡಿಎ ಆಯುಕ್ತ ಮಹದೇವ್ ಹಾಗೂ ಬ್ರೋಕರ್ ಮೋಹನ್ ಮಧ್ಯೆ ದೊಡ್ಡ ಮಟ್ಟದ ವಾರ್ ನಡೆದಿತ್ತು. ಆದರೂ ಬಿಡಿಎನಲ್ಲಿ ಗಟ್ಟಿ ನೆಲೆಯೂರಿದ್ದ ಮೋಹನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇತ್ತೀಚೆಗೆ ಅರ್ಕಾವತಿ ವಿಚಾರದಲ್ಲೂ ಮೋಹನ್ ಕೈಚಳಕ ಎಂದು ಸಂಶಯ ವ್ಯಕ್ತವಾಗಿದೆ.
ಸ್ವತಃ ದೂರು ಕೊಟ್ಟಿದ್ದರು : ಬಿಡಿಎ ಭ್ರಷ್ಟಾಚಾರ ಸಂಬಂಧ ವಿಶ್ವನಾಥ್ ಈ ಹಿಂದೆಯೇ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೆಳಹಂತದ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡೋದಿಲ್ಲ ಎಂಬ ದೂರುಗಳಿವೆ. ಏನೇ ಕ್ರಮ ತೆಗೆದುಕೊಂಡರೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿದ್ದರು. ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ